ಪದ್ಮಜಾ ರಾವ್
ಪದ್ಮಜಾ ರಾವ್
ಪದ್ಮಜಾ ರಾವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಹೆಸರಾಂತ ಕಲಾವಿದೆ. ಇವರು ಕಿರುತೆರೆಯಲ್ಲಿ ನಿರ್ದೇಶಕಿಯಾಗಿಯೂ ಹೆಸರಾಗಿದ್ದಾರೆ.
ಸೆಪ್ಟೆಂಬರ್ 10, ಪದ್ಮಜಾ ರಾವ್ ಅವರ ಜನ್ಮದಿನ. ಇವರು ಬೆಂಗಳೂರಿನವರು.
ಪದ್ಮಜಾ ಅವರು ಚಿಕ್ಕಂದಿನಿಂದ ನಟನೆಯ ಆಸಕ್ತಿಯನ್ನು ಬೆಳೆಸಿಕೊಂಡವರು. ಆದರೆ ನಟನೆ ಕ್ಷೇತಕ್ಕೆ ಬರಲು ಅವರಿಗೆ ಸಾಧ್ಯ ವಾಗಿದ್ದು ತಡವಾಗಿ. ವೈಶಾಲಿ ಕಾಸರವಳ್ಳಿ ಅವರ 'ಮೂಡಲಮನೆ' ಧಾರಾವಾಹಿಯಲ್ಲಿ ಕೆಲಸ ಮಾಡುತ್ತಾ, ಕಲಿಯುತ್ತಾ ಅದರಲ್ಲೇ ಒಂದು ಪಾತ್ರ ಮಾಡಲು ಅವಕಾಶ ಪಡೆದರು. ನಂತರ ಒಂದೊಂದೇ ಅವಕಾಶಗಳು ಹುಡುಕಿ ಬಂದವು. ಬಹುತೇಕ ಕನ್ನಡ ಚಿತ್ರರಗಂಗದ ಎಲ್ಲಾ ಪ್ರಸಿದ್ಧ ಕಲಾವಿದರ ಚಿತ್ರಗಳಲ್ಲಿ ನಟಿಸಿದ್ದಾರೆ. ಹಠವಾದಿ, ಮುಂಗಾರು ಮಳೆ, ಗಾಳಿಪಟ, ಉಗ್ರಮ್ ಸೇರಿದಂತೆ ಇವರು ನಟಿಸಿರುವ ಚಿತ್ರಗಳು ನೂರಾರು.
ಕಿರುತೆರೆ, ಹಿರಿತೆರೆ, ಕಿರುಚಿತ್ರ ಹೀಗೆ ಎಲ್ಲಡೆಯಲ್ಲೂ ಪದ್ಮಜಾ ರಾವ್ ಪಾತ್ರವಹಿಸಿದ್ದಾರೆ. ಕೆಲವು ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಪ್ರೀತಿ ಇಲ್ಲದ ಮೇಲೆ, ಭಾಗ್ಯಲಕ್ಷ್ಮಿ ಮುಂತಾದ ಪ್ರಸಿದ್ಧ ಧಾರಾವಾಹಿಗಳಲ್ಲಿನ ಇವರ ಪಾತ್ರ ನಿರ್ವಹಣೆ ಪ್ರಸಿದ್ಧಿಗೊಂಡಿದೆ.
ಪದ್ಮಜಾ ರಾವ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ಯಾವುದೇ ಕಷ್ಟಗಳಿಲ್ಲದಂತೆ ಅವರ ಬದುಕು ಸುಗಮವಾಗಿರಲಿ.
Padmaja Rao
ಕಾಮೆಂಟ್‌ಗಳು