ಕುಮಾರ್ ಎಚ್
ಕುಮಾರ್ ಎಚ್
ಡಾ. ಎಚ್. ಕುಮಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತ ಬಂದಿದ್ದಾರೆ.
ಸೆಪ್ಟೆಂಬರ್ 12, ಕುಮಾರ್ ಅವರ ಜನ್ಮದಿನ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಮತ್ತು ಪಿಎಚ್. ಡಿ ಸಾಧನೆಗಳನ್ನು ಮಾಡಿದರು. ಕೆಲಕಾಲ ಆರ್. ವಿ. ತಂತ್ರಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.
ಕುಮಾರ್ ಅವರು ಮುಂದೆ ಅಂತರರಾಷ್ಟೀಯ ಮಟ್ಟದಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಸಂಶೋಧನಾತ್ಮಕ ವ್ಯಾಸಂಗ ನಡೆಸಿದರು. ಅಮೆರಿಕ ಅಲ್ಲದೆ ಕತಾರ್ ದೇಶದಲ್ಲೂ ಸಂಶೋಧಕರಾಗಿ ಸೇವೆ ಸಲ್ಲಿಸಿ, ನಂತರದಲ್ಲಿ ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಪ್ರಸಕ್ತ ಅವರು ದಯಾನಂದ ಸಾಗರ್ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾಗಿದ್ದಾರೆ.
ಕುಮಾರ್ ಅವರು ವಿದ್ಯಾರ್ಥಿಗಳೊಡನೆ ಆಪ್ತವಾಗಿ ಬೆರೆಯುವುದನ್ನು ಪ್ರೇರಿರಿಸುವುದನ್ನು ಚಿತ್ರಗಳಲ್ಲಿ ನೋಡುವುದೇ ಚಂದ. ಅಂತೆಯೇ ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮುದಾಯಗಳಲ್ಲಿ ಅವರಿಗೆ ಇರುವ ಆಸಕ್ತಿಯೂ ಅನುಪಮವಾದದ್ದು.
ನಿರಂತರ ಉತ್ಸಾಹಿ, ಪ್ರೇರಣಾಯುತ ಗುರು ಸಾಧಕರಾದ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Kumar H 🌷🌷🌷
ಕಾಮೆಂಟ್ಗಳು