ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ.ಎಂ. ಮಂಜುನಾಥ್


 ವಿ.ಎಂ. ಮಂಜುನಾಥ್ 


ವಿ.ಎಂ. ಮಂಜುನಾಥ್  ಬರಹಗಾರರಾಗಿ ಮತ್ತು ರಂಗಕರ್ಮಿಯಾಗಿ ಹೆಸರಾಗಿದ್ದಾರೆ. 

ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ 1976ರ ಸೆಪ್ಟಂಬರ್ 13ರಂದು ಜನಿಸಿದರು. ತಂದೆ ಮುನಿಮಾರಪ್ಪ.  ತಾಯಿ ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ, ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗ ಡಿಪ್ಲೋಮಾ ಮಾಡಿದರು.

ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, ಲೆವೆಲ್ ಕ್ರಾಸಿಂಗ್ ಕವನ ಸಂಕಲನ, ಬ್ರಾಂಡಿ ಕಥಾಸಂಕಲನ, ಕ್ರಿಮಿ ನಾಟಕ, ಜಾನ್-ಗೋವಾ(ಬ್ರಾಂಡಿ ಪರಿಷ್ಕೃತ), ರಾಯಲ್ ಎನ್ ಫೀಲ್ಡ್, ಅಸ್ಪೃಶ್ಯ ಗುಲಾಬಿ, CK ಜೇಡನ ಆತ್ಮಚರಿತ್ರೆ ಕಾದಂಬರಿಗಳುಮುಂತಾದ ಇವರ ಕೃತಿಗಳು ಪ್ರಟಕಗೊಂಡಿವೆ. ಹೈವೇ ಥಿಯೇಟರ್ಸ್ ಡ್ರಾಮಾ ಟ್ರೂಪ್ ಆರಂಭಿಸಿರುವ ಇವರು ನಾಟಕ ನಿರ್ದೇಶನ ಮಾಡುತ್ತಿದ್ದಾರೆ. ‘ನನ್ನ ಗೆರೆಗಳು’ ಮತ್ತು ‘ಹೆದ್ದಾರಿಯಲ್ಲಿ ಕಂಡ ಚಿತ್ರಗಳು’ ಏಕವ್ಯಕ್ತಿ ಕಲಾಕೃತಿಗಳು ಪ್ರದರ್ಶನ ಕಂಡಿವೆ.

ವಿ.ಎಂ. ಮಂಜುನಾಥ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

On the birthday of writer Manjunath V.M.




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ