ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂದೇಹ



ನಾವು ಪುಟ್ಟವರಿದ್ದಾಗ
ಎಲ್ಲವೂ ನಮಗೆ ತೆರೆದಿತ್ತು
ಅಕ್ಕ ಪಕ್ಕದ ಮನೆಗಳೆಲ್ಲಾ
ನಮ್ಮ ಮುಕ್ತ ಒಡನಾಟಕ್ಕಿದ್ದವು
ಎಲ್ಲರೂ ನಮ್ಮವರೆಂದೆನಿಸುತ್ತಿತ್ತು
ಇಂದು ನಮ್ಮ ಮನೆಯೂ ಅಲ್ಲ,
ನಮ್ಮ ಮೂಲೆಯಷ್ಟೇ ನಮ್ಮದು
ನಮ್ಮ ಪಾಸ್ವರ್ಡಿನಷ್ಟೇ ಎಲ್ಲ ನಿಗೂಢ!
ಫೇಸ್ಬುಕ್ ವಾಟ್ಸ್ಯಾಪ್ಗಳಲ್ಲೇ ನಮ್ಮ
ಗುಡ್ಮಾರ್ನಿಂಗ್-ಈವನಿಂಗ್-ನೈಟುಗಳು.
ಎಲ್ಲವೂ ಕಂಡೂ ಕಾಣದಹಾಗೆ!
ಅದನ್ನು ಹೇಳುವಾಗಲೂ, ಈ ಕ್ಷಣ
ಆ ಕಡೆಯವರಿಗೆ ಈ ರಗಳೆ ಬೇಕಿತ್ತೋ 
ಬೇಡವೋ ಎಂಬಂತ ಜಿಜ್ಞಾಸೆ
ಒಳಗೊಳಗೇ ಹಿಂಡೋ ಹಾಗೆ;
ಇವೆಲ್ಲವುಗಳ ಜೊತೆ
ಪರ್ಮೆನೆಂಟ್ ಸಂದೇಹ ...
ನಾನು ಅಂದ್ರೆ, ನಾನಾ? 
  • ಇಲ್ಲ, ಇನ್ನೇನೋನಾ!😊




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ