ದೀಪದ ಮಲ್ಲಿ
ದೀಪದ ಮಲ್ಲಿ
ಎಲೆಲೆ! ದೀಪದ ಮಲ್ಲಿ,
ಎದೆಯ ಕತ್ತಲೆಯಲ್ಲಿ
ಪದುಮ ದೀಪವ ಹಿಡಿದು
ಬಾಗಿ ನಿಂತು
ಕವಿಗಿನಿತೆ ಬೆಳಕಿನಲ್ಲಿ
ಎಂಬ ಕಿರುನಗೆಯಲ್ಲಿ
ಹಿಗ್ಗಿ ಹೂವಾಯ್ತಿಂತು
ಪ್ರಾಣ ತಂತು.
ನೀನೆ ಕಂಚಿನ ಬೊಂಬೆ ?
ಅಲ್ಲ ಮಿಂಚಿನ ಬೊಂಬೆ ?
ಹಂಬಲವನೆದೆಯೊಳಗೆ
ತುಂಬಿದೊಲುಮೆ.
ಎಲ್ಲಿತ್ತೊ ಒಂದು ದನಿ,
ಎಲ್ಲಿತ್ತೊ ಒಂದು ಬನಿ,
ನಿನ್ನಿಂದ ಹಾಡಾಯ್ತು
ಅಮೃತವಾಯ್ತು.
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಕಾಮೆಂಟ್‌ಗಳು