ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವ ಆಹಾರ ದಿನ


 ವಿಶ್ವ ಆಹಾರ ದಿನ

World Food Day 

ವಿಶ್ವದಲ್ಲಿ ಯಾರಿಗೂ ಆಹಾರದ ಕೊರತೆ ಉಂಟಾಗದಿರಲಿ.  ಆಹಾರ ಧಾನ್ಯ ಬೆಳೆಯುವವನಿಗೆ, ಆಹಾರ ತಯಾರಿಸುವವರಿಗೆ ಮತ್ತು ಆಹಾರ ನೀಡುವವರಿಗೆ ನೆಮ್ಮದಿಯಿಂದ ಜೀವನ ಸಾಗುವಂತಾಗಲಿ.  ಎಲ್ಲರೂ ಸ್ವಾವಲಂಬಿಗಳಾಗುವ ಸಮಾನತೆ ಮೂಡಲಿ. 
ಲೋಕದಲ್ಲಿ ಶಾಂತಿ ಇರಲಿ. 

ಈ ಸಂದರ್ಭದಲ್ಲಿ ಕವಿ ಡಾ|| ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್ಟರ ಒಂದು ಕವಿತೆ ನೆನಪಾಯ್ತು

ಯಾರೋ ಬೇಡುವ ಯಾರೋ ಹಾಡುವ
ಬೆರೆಯದ ವಾಣಿಗಳು,
ಯಾರೋ ಮುಗಿಲಲಿ ಯಾರೊ ಕಣಿವೆಯಲಿ
ಹೊಂದದ ಚಿತ್ರಗಳು!

ತಿನ್ನಲಾರದೆ ಅನ್ನವ ಮೋರಿಗೆ
ತೂರುವ ಹಸ್ತಗಳು,
ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ
ಒಡಲಿಗೆ ವಸ್ತುಗಳು,
ಚಿನ್ನದ ಭಾರಕೆ ತೂರಾಡುವ ಮೈ
ಸರಿಯುವ ಠೀವಿಗಳು,
ಹೊದಿಯಲು ಹಚ್ಚಡ ಇಲ್ಲದೆ ಚಳಿಯಲಿ
ನಡುಗುವ ದೇಹಗಳು.

ಉಣ್ಣುವ ಬಾಯಿಗೆ ದುಡಿಯುವ ಕೈಗಳು
ಅವರವರದೆ ಇರಲಿ,
ಅನುಭವಿಸುವ ಸುಖವೆಲ್ಲಕೆ ತಮ್ಮದೆ
ಬೆವರಿನ ಬೆಲೆ ತೆರಲಿ,
ಜೀವ ಜೀವಗಳ ನಡುವೆ ಎದ್ದ
ಗೋಡೆಗಳ ಪಾಯ ಬಿರಿದು,
ಉರುಳಿ ನೆಲಕೆ ತಡೆ, ತೊಲಗಲಿ ಅಂತರ
ತರತಮ ನೀತಿಗಳು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ