ಶ್ವೇತಾ ಹೊಸಬಾಳೆ
ಶ್ವೇತಾ ಹೊಸಬಾಳೆ
ಶ್ವೇತಾ ಹೊಸಬಾಳೆ ಅವರು ಕಲಾವಿದೆ, ಛಾಯಾಗ್ರಾಹಕಿ, ಬರಹಗಾರ್ತಿ ಹೀಗೆ ಬಹುಮುಖಿ ಪ್ರತಿಭೆ.
ಅಕ್ಟೋಬರ್ 28, ಶ್ವೇತಾ ಅವರ ಜನ್ಮದಿನ. ಮೂಲತಃ ಸಾಗರದವರಾದ ಇವರು ಪ್ರಸಕ್ತ ಬೆಂಗಳೂರು ನಿವಾಸಿ. ಇವರು ಕನ್ನಡ ಎಂ.ಎ ಹಾಗೂ ಪತ್ರಿಕೋದ್ಯಮದಲ್ಲಿ ಪಿ.ಜಿ ಡಿಪ್ಲೊಮಾ ಓದಿದ್ದಾರೆ.
ಶ್ವೇತಾ ಅವರು ಹಲವು ವರ್ಷಗಳ ಕಾಲ ಈಟಿವಿ, ಝೀ ಕನ್ನಡ, ಕಲರ್ಸ್ ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡಿದವರು.
ಉತ್ತಮ ಓದುಗರೂ, ಬರಹಗಾರರೂ ಆದ ಶ್ವೇತಾ ಅವರ ಬಹುಮುಖಿ ಬರಹಗಳು ಎಲ್ಲೆಡೆ ಪ್ರಕಾಶಿಸಿವೆ.
ಪ್ರವಾಸ, ಪೇಂಟಿಂಗ್, ಫೋಟೋಗ್ರಫಿ ಹೀಗೆ ಶ್ವೇತಾ ಅವರ ಪ್ರತಿಭಾನ್ವಿತ ಆಸಕ್ತಿಗಳು ಬಹುಮುಖಿಯಾದದ್ದು.
ಪ್ರತಿಭಾಶಾಲಿನಿ ಶ್ವೇತಾ ಹೊಸಬಾಳೆ ಅವರಿಗೆ ಬಾಳ್ವೆ ಸದಾ ಹೊಸದಾಗಿರಲಿ ಎಂದು ಆಶಿಸುತ್ತ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
Happy birthday Shwetha Hosabale 🌷🌷🌷
ಕಾಮೆಂಟ್‌ಗಳು