ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿತ್ರಾ ವೆಂಕಟರಾಜು


ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು ರಂಗಕಲಾವಿದೆಯಾಗಿ ಹೆಸರಾದ ಬಹುಮುಖಿ ಪ್ರತಿಭಾನ್ವಿತ ಸಾಧಕಿ.

ಅಕ್ಟೋಬರ್ 22, ಚಿತ್ರಾ ಅವರ ಜನ್ಮದಿನ.  ಇವರು ಚಾಮರಾಜನಗರದ ರಂಗಕರ್ಮಿ, ಚಿಂತಕ, ಸಮಾಜಮುಖಿ ಕಾರ್ಯಕರ್ತರಾದ ಕೆ‌.  ವೆಂಕಟರಾಜು Venkataraju Krishnamurty ಅವರ ಸುಪುತ್ರಿ. 

ಚಿತ್ರಾ ಅವರು ರಂಗಭೂಮಿಯಲ್ಲಿ ಯಶಸ್ವೀ 50 ವರ್ಷಗಳನ್ನು ದಾಟಿ ಸಕ್ರಿಯವಾಗಿ ಮುನ್ನಡೆದಿರುವ  ಶಾಂತಲಾ ಕಲಾವಿದರು ತಂಡದ ಮೂಲಕ ರಂಗಭೂಮಿಗೆ ಪರಿಚಯವಾದವರು.  ಆ ತಂಡದಲ್ಲಿ ಬಾಲ ಕಲಾವಿದೆಯಾಗಿ, ನಟಿಯಾಗಿ ಬೆಳೆದ ಚಿತ್ರಾ ಆ ತಂಡಕ್ಕೆ ಅನೇಕ ನಾಟಕಗಳನ್ನು ನಿರ್ದೇಶನ ‌ಮಾಡಿದ್ದಾರೆ.  ಅಷ್ಟೇ ಅಲ್ಲದೆ ಚಿತ್ರಾ, ರಂಗಾಯಣ ಮತ್ತು ನೀನಾಸಮ್ ಎಂಬ ಮಹಾನ್ ರಂಗ ವಿಶ್ವವಿದ್ಯಾಲಯಗಳಲ್ಲೂ  ಕಲಿತು ಬಂದವರು. ನೀನಾಸಮ್ ತಿರುಗಾಟದಲ್ಲಿ‌ ಅವರು ನೆನಪಲ್ಲಿ‌ ಉಳಿಯುವ ಪಾತ್ರಗಳನ್ನು ಮಾಡಿದ್ದಾರೆ. ಅವರ ಅಮೃತಾ ಪ್ರೀತಮ್‌ ಮೇಲಿನ ಏಕವ್ಯಕ್ತಿ ನಾಟಕ  ಈಗಲೂ ಜನಪ್ರಿಯ  ಪ್ರದರ್ಶನಗಳನ್ನು ಕಾಣುತ್ತ ಸಾಗಿದೆ. 

ಚಿತ್ರಾ ಅವರು ಕಳೆದ ಎರಡು ದಶಕಗಳಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ರಂಗಭೂಮಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಕಲಾಶಿಬಿರಗಳನ್ನು ರಂಗಾಸಕ್ತರಿಗಾಗಿ ನಿರ್ವಹಿಸಿದ್ದಾರೆ.  ಜೊತೆಗೆ ಅವರ ಕಲಿಕೆಯ ಶ್ರದ್ಧೆಯೂ ಅಪಾರವಾದದ್ದು.  ಇವರು ಸುಶ್ರಾವ್ಯವಾಗಿ ಹಾಡುತ್ತಾರೆ.  ಸಿತಾರ್ ಮತ್ತು ಕಥಕ್ ನೃತ್ಯ ಕಲಿಯುತ್ತಿದ್ದಾರೆ‌ ಹಲವಾರು ಚಲನಚಿತ್ರಗಳಲ್ಲೂ  ಅಭಿನಯಿಸಿದ್ದಾರೆ.  ಅಪಾರ ಓದುಗರಾದ ಇವರು ಉತ್ತಮ ಬರಹಗಾರ್ತಿ ಮತ್ತು ಕಲಾವಿಮರ್ಶಕಿ.

ಪ್ರತಿಭಾನ್ವಿತ ಕಲಾವಿದೆ, ಸರಳ, ಸಹೃದಯಿ ಚಿತ್ರಾ ವೆಂಕಟರಾಜು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

Happy birthday Chitra Venkataraju 🌷🌷🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ