ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೆಂಕಟರಮಣನೆ ಬಾರೋ



ವೆಂಕಟರಮಣನೆ ಬಾರೋ 
ಶೇಷಾಚಲವಾಸನೆ ಬಾರೋ              
ಪಂಕಜನಾಭ ಪರಮ ಪವಿತ್ರ 
ಶಂಕರ ಮಿತ್ರನೇ ಬಾರೋ              

ಮುದ್ದು ಮುಖದ ಮಗುವೆ 
ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ         ||೧||

ಮಂದರ ಗಿರಿಯನೆತ್ತಿದ 
ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ    ||೨||

ಕಾಮನಯ್ಯ ಕರುಣಾಳು 
ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ  ||೩||

ಸಾಹಿತ್ಯ: ಪುರಂದರದಾಸರು


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ