ಸೌಮ್ಯಾ. ವಿ. ಗೌಡ
ಸೌಮ್ಯಾ ವಿ. ಗೌಡ
ಕೃಷಿ ಕ್ಷೇತ್ರದಲ್ಲಿ ಅಕ್ಕರೆಯಿಂದ ತೊಡಗಿಕೊಂಡಿರುವ ಸೌಮ್ಯಾ ವಿ. ಗೌಡ ಅವರು ರೈತಾಪಿ ಪತ್ರಿಕೆಯನ್ನು ಜನಮನಕ್ಕೆ ತಲುಪಿಸುವಲ್ಲಿ ಅಪಾರ ಕೆಲಸ ಮಾಡುತ್ತಿದ್ದಾರೆ. ಸ್ವಾವಲಂಬಿಯಾದ ಇವರು ಹಲವು ರೀತಿಯಲ್ಲಿ ಸಕ್ರಿಯರಾಗಿದ್ದು, ಚನ್ನಪಟ್ಟಣದ ಬೊಂಬೆಗಳ ವಹಿವಾಟು ಕೂಡ ನಿರ್ವಹಿಸುತ್ತಿರುವ ಕ್ರಿಯಾಶೀಲೆ. ಈ ನಿಟ್ಟಿನಲ್ಲಿ ಅನೇಕ ಕರಕುಶಲಿಗಳನ್ನು ಬೆಳೆಸುವ ಕಾಯಕದಲ್ಲೂ ನಿರತರಾಗಿದ್ದಾರೆ.
ಬದುಕಿನ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಕ್ರಿಯಾಶೀಲರಾಗಿದ್ದು, ಸಾಹಿತ್ಯ, ಸಂಸ್ಕೃತಿ, ಪರಿಸರ, ಗ್ರಾಮೀಣ ಬದುಕಿನ ಕುರಿತಾಗಿ ಅಪ್ತ ಅಕ್ಕರೆ ಉಳ್ಳ ಸಹೃದಯಿ ಸೌಮ್ಯಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಸೌಮ್ಯಾ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷 ನನ್ನ ಬರಹಗಳಿಗೆ ನಿರಂತರ ಪ್ರೋತ್ಸಾಹಿಸುತ್ತಿರುವ ನಿಮಗೆ ಕೃತಜ್ಞನಾಗಿದ್ದೇನೆ.
Happy birthday Sowmya V Gowda 🌷🌷🌷
ಕಾಮೆಂಟ್‌ಗಳು