ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಶ್ವತ



 ಶಾಶ್ವತ

ಮಗುವಿನಂತಹ ಸಹೃದಯಿ ಗೆಳತಿ ನಮ್ಮ ಶಾಶ್ವತ.  ಶಾಶ್ವತ ತಮ್ಮ ಮಗುವಿನ ಜೊತೆಯಲ್ಲಿ ಚಿತ್ರ ಹಾಕಿದಾಗ ಚಿತ್ರದಲ್ಲಿ ಎರಡು ಕಂದಮ್ಮಗಳಿರುವಂತೆ ಭಾಸವಾಗುತ್ತದೆ.

ಡಿಸೆಂಬರ್ 18 ಶಾಶ್ವತ ಅವರ ಜನ್ಮದಿನ.  ಎಂ.ಎ., ಬಿ.ಎಡ್ ವ್ಯಾಸಂಗ ಮಾಡಿರುವ ಇವರು ಸಂವೇದನಾಶೀಲ ಕಲಾವಿದೆ.  ಉತ್ತಮವಾಗಿ ಚಿತ್ರ ಬರೆಯುವ ಇವರು ಕೆಲಕಾಲ ಕ್ಯಾಸ್ಟಿಂಗ್ ಕಲೆಯಲ್ಲೂ ಉದ್ಯಮಿಯಾಗಿ ದುಡಿದಿದ್ದರು.  

ತಮ್ಮ ಮಗುವಿನ ಬೆಳವಣಿಗೆ ಮತ್ತು ಕುಟುಂಬವನ್ನು ಪ್ರಥಮ ಆದ್ಯತೆಯಾಗಿರಿಸಿಕೊಂಡಿರುವ ಶಾಶ್ವತ ಅವರು, ವ್ಯಾವಹಾರಿಕ ವೃತ್ತಿ ಚಟುವಟಿಕೆಗಳಿಗೆ ಕೆಲ ಕಾಲ ವಿರಾಮ ನೀಡಿದ್ದಾರೆ.  ಆದರೆ, ಅವರಲ್ಲಿರುವ ಕಲಾಭಿರುಚಿ ಬತ್ತದ ಚಿಲುಮೆಯಂತೆ ನಿರಂತರ ಕಂಗೊಳಿಸುತ್ತಿರುವುದು ಸರ್ವವೇದ್ಯ.  ಅಂತೆಯೇ ಅವರ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಅಭಿರುಚಿಗಳೂ ಆಪ್ತವೆನಿಸುವಂತದ್ದು.  ಉತ್ತಮ ಸ್ನೇಹಕ್ಕೆ ಅಪಾರ ಬೆಲೆ ನೀಡುವ ಶಾಶ್ವತ ನಿತ್ಯಹಸನ್ಮುಖಿಯಾದ ಆಪ್ತ ಹೃದಯಿ.

ಆಪ್ತ ಶಾಶ್ವತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಶಾಶ್ವತ ಅವರೆ, ನಿಮ್ಮಲ್ಲಿರುವ ಸುಖ, ಸಂತಸ, ಕಲಾಭಿರುಚಿಗಳು ಹಾಗೂ ನಿಮ್ಮ ಆತ್ಮೀಯ ಸ್ನೇಹ ನಮಗೆ 'ಶಾಶ್ವತ'ವಾಗಿರಲಿ.😇

Happy birthday Shashwatha Nadaganty

🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ