ಕಬ್ಬನ್ ಪಾರ್ಕ್
1980-83 ಅವಧಿಯಲ್ಲಿ ಬಿ.ಟಿ.ಎಸ್ ಬಸ್ಸಿನಲ್ಲಿ ಜಿ.ಪಿ.ಒ ಬಳಿ ಇಳಿದು ಅಲ್ಲಿಂದ ಸುಂದರ ಕಬ್ಬನ್ ಪಾರ್ಕ್ ಮಾರ್ಗದಲ್ಲಿ ಲ್ಯಾವೆಲ್ಲಿ ರಸ್ತೆಯಲ್ಲಿದ್ದ ನಮ್ಮ ಎಚ್ಎಮ್‍ಟಿ ಕಚೇರಿಗೆ ನಡೆದು ಹೋಗುತ್ತಿದ್ದೆ. ಅಂದು ನಾನು ಹೋಗುತ್ತಿದ್ದ ಆ ಹಾದಿ ಸ್ವರ್ಗ ಸಮಾನವಾಗಿತ್ತು ಎಂಬ ಭಾವ ಇಂದೂ ನನ್ನಲ್ಲಿದೆ. ಮುಂದೆ ನಮಗೆ ಸಂಸ್ಥೆಯ ವಾಹನ ವ್ಯವಸ್ಥೆ ಕಚೇರಿ ಬಾಗಿಲಿಗೆ ನಮ್ಮನ್ನು ಬಿಡುತ್ತಿದ್ದುದು ಮತ್ತು ನಾನೇ ಸ್ಕೂಟರ್ ನಡೆಸಲು ಪ್ರಾರಂಭಿಸಿದ್ದು ಇವೆಲ್ಲಾ ಈ ಅನುಭಾವವನ್ನು ಇಲ್ಲದಂತಾಗಿಸಿಬಿಟ್ಟಿದ್ದವು. ಆ ಸುಖ ಮುಂದೆ ಎಂದೂ ಸಿಗಲಾರದು ಎಂದು ಭಾವಿಸಿದ್ದ ನನಗೆ ಪುನಃ 2015ರ ವರ್ಷದಿಂದ ಮುಂಜಾನೆ ಸೈಕಲಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಅಡ್ಡಾಡುವಾಗ ಪುನಃ ಅದೇ ದಕ್ಕಿದ ಸಂತಸಭಾವ ಮೂಡತೊಡಗಿತು. ವಿಶ್ವ ನಮಗಿದ್ದೇ ಇದೆ. ನಾವು ಅದರೊಂದಿಗಿರಬೇಕು ಅಷ್ಟೇ.
In the years 1980 to 1983, I used to get down from BTS Bus at GPO and walk towards my HMT office at Lavelle Road via the beautiful Cubbon Park. Even today I believe those were my best moments, as I used to love those morning ambience of Cubbon Park as if I used to move in heaven. Of late, due to Company Transport dropping almost near office and moving in my own two wheeler, I lost those mesmerising moments. Often I used to think those beautiful days were lost me for ever, until I got the same experience in my morning cycling routines since the year 2015. World is always there for us, we need to just be with it.
Memory from 18.12.2015
ಕಾಮೆಂಟ್‌ಗಳು