ಸಹನಾ ರಾವ್
ಸಹನಾ ರಾವ್
Happy birthday Sahana Rao 🌷🌷🌷
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಸಹನಾ ರಾವ್ ಒಂದು ಕನ್ನಡದ ಪ್ರೀತಿಯ ಹಣತೆ.
ಸಹನಾ ಅವರಿಗಿರುವ ಸಾಹಿತ್ಯದ ಓದಿನ ವಿಶಾಲತೆ ಮತ್ತು ಆಳ, ಅಷ್ಟೇ ವೈವಿಧ್ಯಪೂರ್ಣ ಎಲ್ಲ ರೀತಿಯ ಸಂಗೀತಗಳ ಕುರಿತಾದ ಅಭಿರುಚಿ, ಓಹ್ ಇಷ್ಟೆಲ್ಲ ಸಾಧ್ಯವೇ ಎಂಬ ಬೆರಗು ಹುಟ್ಟಿಸುತ್ತೆ. ಹಲವು ಪ್ರತಿಷ್ಟಿತ ಮೀಡಿಯಾಗಳ ಜೊತೆ ಕೆಲಸ ಮಾಡಿದ ಅನುಭವವೂ ಅವರೊಂದಿಗಿದೆ. ಹಲವು ವಿಚಾರಗಳಲ್ಲಿ ಅಧ್ಯಯನ, ವ್ಯಾಸಂಗದ ಕೋರ್ಸುಗಳನ್ನು ಪೋಣಿಸಿಕೊಳ್ಳುತ್ತಲೇ ಇರುತ್ತಾರೆ.
ನನಗಂತೂ ಏನು ವಿಡಿಯೋ ಮತ್ತು ಹಾಡು ಬೇಕಿದ್ರೂ ಸಹನಾನೇ ಕೇಳೋದು. ಅದೇನು ಸಹನೇನೊ ಈ ಮಹಾತಾಯಿಗೆ, ಆಕೆಗೆ ಮಧ್ಯರಾತ್ರಿ ಆಗಿದ್ರೂ ಹುಡುಕಿ ಕಳಿಸ್ತಾರೆ. ನಾನು ಏನು ವಿಡಿಯೊ ಪೋಸ್ಟ್ ಮಾಡಿದರೂ thank you Sahana Rao ಎಂಬ standard ವಾಕ್ಯ ಜೊತೆಗೂಡಿರುತ್ತೆ.
ಭಾರತೀಯ ಸಂಸ್ಕೃತಿ, ಸಾಹಿತ್ಯ, ಸಂಗೀತ ಇತ್ಯಾದಿಗಳ ಕುರಿತು ಅವರ ಮಾತುಗಳನ್ನು ಓದೋದೇ ಒಂದು experience. ತಮ್ಮ ಯಾವ ಜ್ಞಾನವನ್ನೂ ಪ್ರದರ್ಶನಕ್ಕಿಡದೆ ತಾವು ಕಂಡ ಶುದ್ಧ ಜೀವನ ಪ್ರೀತಿಯ ಅನುಭಾವವನ್ನು ಮಾತ್ರಾ ತೆರೆದಿಡುವ ಹೃದಯವಂತೆ ಈಕೆ.
ಎಂದೂ ನೋಡಿಲ್ಲ. ಇರುವುದು ಸಪ್ತ ಸಾಗರದಾಚೆಯೆಲ್ಲೊ. ಆದರೂ ಅಲ್ಲಿರುವ ಕನ್ನಡದ ಹಣತೆಯ ಸಹನೆಯ ಪ್ರತಿರೂಪ ಸಹನಾ ರಾವ್ ಎಂಬ ಭಾವವೇ ಅಪ್ಯಾಯಮಾನ.
ಆತ್ಮೀಯ ಸಹನಾ ರಾವ್ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
ಕಾಮೆಂಟ್‌ಗಳು