ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪುಟಾಣಿ ಆನಂದ



 ಪುಟಾಣಿ ಸೌಂದರ್ಯಾನಂದ ಸಂಗತಿಗಳು


ನಿನ್ನೆ ದುಬೈನ ಡಿಸ್ಕವರಿ ಗಾರ್ಡನ್ ಅಲ್ಲಿರೊ ಆಂಧ್ರ ಶೈಲಿಯ 'ಗೋದಾವರಿ' ಹೋಟಲಿಗೆ ಊಟಕ್ಕೆ ಹೋದಾಗ, ನಮ್ಮನ್ನು ಮರುಳುಗೊಳಿಸೊ ಹಾಗೆ ಒಂದು ಪ್ಲೇಟ್ನಲ್ಲಿ ಈ ಕುರುಂಕುರುಂ ತಂದಿಟ್ರು. ಅದಕ್ಕೆ ಅದೆಷ್ಟು ಮನಸೋತೆ ಅಂದ್ರೆ ಅದನ್ನು ಎಲ್ಲಿ ಸ್ಟೋರ್ ಮಾಡಿಟ್ಟುಕೊಂಡಿದ್ದಾರೆ, ಹುಡುಕಿ ಅದರ ಚಿತ್ರವನ್ನೂ ಕ್ಲಿಕ್ ಮಾಡಿದೆ. ಇವು ಬಣ್ಣದಲ್ಲಿ ಮಾತ್ರ ಸೌಂದರ್ಯಯುತವಾಗಿಲ್ಲದೆ, ದಂತಭಗ್ನತೆಯ ಅಪಾಯವಿಲ್ಲದೆ ಹಗುರವಾಗಿ ಹಿತವಾಗಿ ತಿನ್ನೋದಕ್ಕೂ ಹಿತವಾಗಿತ್ತು 😊.  ಚಿಕ್ಕವಯಸ್ಸಲ್ಲಿ ಅಂಗಡಿಗಳಿಗೆ ಹೋದಾಗ ಅಲ್ಲಿ ಹಳದಿ ಬಣ್ಣದ ಬೋಟಿ ಇರ್ತಿತ್ತಲ್ಲ ಅದು ಕೂಡಾಹೀಗೇ ರುಚಿ ಇರ್ತಿತ್ತೇನೊ ಅನಿಸಿತು. ನಾವು ಪ್ರೀತಿಯ ಮುಕ್ತ ಮಗುವಿನ ಭಾವ ಹೊಂದಿದ್ದಾಗ, ಬದುಕಲ್ಲಿ ಎಲ್ಲೆಡೆಯೂ  ಸೌಂದರ್ಯದ ಖುಷಿ ಕಾಣಲು ಸಾಧ್ಯ. ಆ ಹೋಟಲಿನವರ ಪ್ರೀತಿ ಕೂಡ ಹಾಗೇ ಇತ್ತು. ಹೋಟಲಿನವರಿರಬಹುದು,ಯಾರೇ ಇರಬಹುದು,  ನಮ್ಮ ವ್ಯಕ್ತಿವನ್ನು ಇಲ್ಲವೇ  ಮನೋಭಾವವನ್ನು ಇಲ್ಲವೇ ನಾವು ನೀಡುವ ಆತಿಥ್ಯವನ್ನು  ಹೇಗೆ ಸಣ್ಣ ಸಣ್ಣ ಸಂಗತಿಗಳಲ್ಲಿ ಹೊರಹೊಮ್ಮಿಸಲು ಸಾಧ್ಯವಿದೆ ಅನಿಸಿತು‍😊

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ