ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರಹರಿ ಕೆ.ಎಸ್.


ನರಹರಿ ಕೆ. ಎಸ್.


ಕೆ. ಎಸ್.  ನರಹರಿ ಅವರು ಊಹಿಸಲಾಗದಷ್ಟು ಬಹುಮುಖಿ ಪ್ರತಿಭೆ.  

ಮಾರ್ಚ್ 13, ನರಹರಿ ಅವರ ಜನ್ಮದಿನ. 1990ರ ದಶಕದಲ್ಲಿ ಅವರು ನಾನಿದ್ದ ಎಚ್ಎಮ್‍ಟಿ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.  ಅಂತರರಾಷ್ಟ್ರೀಯ ವಿಭಾಗ ಮತ್ತು ಮಾರ್ಕೆಟಿಂಗ್ ವಿಭಾಗಗಳಲ್ಲಿ ಅವರು ಮಾಡುತ್ತಿದ್ದ ಜಾಹಿರಾತು ವ್ಯವಸ್ಥೆ, ಹೊಸ ರೀತಿಯಲ್ಲಿನ ವಸ್ತುಗಳ ಲಾಂಚಿಂಗ್ ಇವೆಲ್ಲ ಅಂದಿನ ಕಾಲಕ್ಕೇ ಅದ್ಭುತ ಪ್ರಯೋಗಗಳು. 

ನಾನು ಕನ್ನಡ ಸಂಪದದಲ್ಲಿ ವ್ಯವಸ್ಥೆ ಮಾಡುತ್ತಿದ್ದ
ರಸಪ್ರಶ್ನೆಗಳಿಗೆ ಹಲವು ವರ್ಷ ನರಹರಿ ಅವರೇ ಕ್ವಿಜ್ ಮಾಸ್ಟರ್.  ನಾವು ಅಂದು ಮಾಡುತ್ತಿದ್ದ ಆ ಕೆಲಸ ಯಾವುದೇ ಜನಪ್ರಿಯ ಟಿವಿ ಕ್ವಿಜ್ ಕಾರ್ಯಕ್ರಮಗಳಿಗೂ ಕಡಿಮೆ ಇರಲಿಲ್ಲ.  

ಮುಂದೆ ನರಹರಿ ಅನೇಕ ಪ್ರಸಿದ್ಧ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿ ಪ್ರಸಿದ್ಧರಾದರು. ಅನೇಕ ಮ್ಯಾನೇಜ್ಮೆಂಟ್ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ತಜ್ಞರಾಗಿ ಬೋಧಿಸಿದರು.  ಅನೇಕ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಟ್ಟದ ಗೌರವಗಳನ್ನು ಗಳಿಸಿದರು.

ನರಹರಿ ಅವರ ಜ್ಞಾನವಿಸ್ತಾರ ಅಪಾರ. ಕ್ರೀಡೆ, ಸಿನಿಮಾ, ಸಂಗೀತ, ಸಾಹಿತ್ಯ, ವಿಜ್ಞಾನ, ಲೋಕ ಜ್ಞಾನ ಹೀಗೆ ಅವರಿಗೆ ತಿಳಿಯದ ವಿಚಾರವಿಲ್ಲ.  ಈ ಎಲ್ಲ ಕ್ಷೇತ್ರಗಳ ಮಹಾನ್ ವ್ಯಕ್ತಿಗಳ ಜೊತೆಯಲ್ಲಿ ಅವರಿಗೆ ಆತ್ಮೀಯ ಒಡನಾಟ ಇರುವುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಅವರು ಹಾಡುತ್ತಾರೆ. ಬರೆಯುತ್ತಾರೆ. ಅವರೊಬ್ಬ ಅಸಾಮಾನ್ಯ ಸಂಘಟಕ, ಬೋಧಕ, ಮಾರ್ಗದರ್ಶಿ ಮತ್ತು ಅಪರೂಪದ ಗೆಳೆಯ.

ಆತ್ಮೀಯ ನರಹರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


 Happy birthday Narahari KS 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ