ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಂದಿನಿ

 


ನಂದಿನಿ


ನಂದಿನಿ ಎಂಬುದು ಶ್ರೇಷ್ಠತೆಗೆ ಹೆಸರು.  ನಾ ಈಗ ಹೇಳುತ್ತಿರುವ ನಂದಿನಿ, ನಟಿಸಿದ ಒಂದೇ ಚಿತ್ರವಾದರೂ ಶಾಶ್ವತವಾದ ಸ್ಮರಣೀಯ ಸಾಧನೆ ಮಾಡಿದವರು.

ನಂದಿನಿ ಕನ್ನಡ ಚಿತ್ರನಟಿಯಾಗಿ ಅಭಿನಯಶ್ರೇಷ್ಠತೆಗೆ ಊರ್ವಶಿ ಪ್ರಶಸ್ತಿಯನ್ನು ಪಡೆದವರು. 

ನಂದಿನಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ನಂಬಿಯಾರರ ಮಗಳು. ಇವರ ವಾಸ್ತವ ಹೆಸರು ಹೇಮಾ. ತಾರಾನಾಮ ನಂದಿನಿ. ಬಾಲ್ಯದಿಂದಲೂ ಸಂಗೀತ, ಸಾಹಿತ್ಯ, ನೃತ್ಯಗಳಲ್ಲಿ ಇವರಿಗೆ ತೀವ್ರ ಆಸಕ್ತಿ ಇತ್ತು.

ನಂದಿನಿ ಕೇರಳದಲ್ಲಿ ಜನಿಸಿದ್ದರೂ ಬೆಂಗಳೂರಿನಲ್ಲಿ ವಾಸಮಾಡುತ್ತಿದ್ದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು. ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ಮದುವೆಯಾದರು. ಬೆಂಗಳೂರಿನ ಚಿತ್ರ ಹಂಚಿಕೆದಾರರೂ ಕರ್ನಾಟಕ ಫಿಲ್ಮ್ ಚೇಂಬರಿನ ಹಾಗೂ ಫಿಲ್ಮ್ ಫೆಡರೇಷನ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದ ಎಂ. ಭಕ್ತವತ್ಸಲಂ ಇವರ ಪತಿ. 

ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಕಾಡು (1974) ಇದೊಂದೇ ನಂದಿನಿ ಅಭಿನಯಿಸಿದ ಚಿತ್ರ. ಅದಕ್ಕೆ ಮುನ್ನ ಇವರಿಗೆ ಅಭಿನಯದ ಅನುಭವವಿರಲಿಲ್ಲ. ರಂಗವೇದಿಕೆಯನ್ನು ಈಕೆ ಹತ್ತಿದವರಲ್ಲ. ಕಾಡು ಚಿತ್ರದಲ್ಲಿನ ಗೌಡಿತಿಯ ಹೆಚ್ಚು ಮಾತಿಲ್ಲದ ಪಾತ್ರದಲ್ಲಿ ಮುಖಭಾವಗಳಿಂದಲೇ ಅಭಿವ್ಯಕ್ತಿ ನೀಡಿ ಒಳ್ಳೆಯ ಅಭಿನಯದಿಂದಾಗಿ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದರು. ರಾಷ್ಟ್ರಮಟ್ಟದಲ್ಲಿಯೂ ಸರ್ವೋತ್ತಮ ಅಭಿನಯಪ್ರಶಸ್ತಿಯಾದ ಊರ್ವಶಿಯನ್ನು ಪಡೆದ ಮೊದಲ ಕನ್ನಡ ಕಲಾವಿದೆ ಇವರು.

Nandini acted only in one movie but remembered for ever 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ