ಬಣ್ಣಾ ಆರ್ಟ್ ಶಶಿಕಾಂತ್
ಬಣ್ಣಾ ಆರ್ಟ್ ಶಶಿಕಾಂತ್
ಕಲಾಪ್ರಿಯರಿಗೆ, ಬೆಂಗಳೂರಿನಲ್ಲಿ ಕನ್ನಡದ ಮಹಾನ್ ವ್ಯಕ್ತಿಗಳ ವರ್ಣಚಿತ್ರಗಳತ್ತ ಗಮನ ಹರಿಸುವವರಿಗೆ ಎದ್ದು ಕಾಣುವ, ಆಪ್ತವಾಗಿ ಕಾಡಿ ಮನಸೆಳೆವ ಹೆಸರು 'ಬಣ್ಣಾ ಆರ್ಟ್'. ಇವರ ಚಿತ್ರಗಳನ್ನು ಕಾಣುವುದೇ ಕಣ್ಗಳಿಗೆ ಹಬ್ಬದಂತೆ.
ಈ ಬಣ್ಣ ಆರ್ಟ್ ಸಂಸ್ಥೆಯ ರೂವಾರಿ ಶಶಿಕಾಂತ್ ಅವರು. ಇವರು ಬೆಂಗಳೂರಿನಲ್ಲಿ ಪ್ರಖ್ಯಾತ ಡಿಜಿಟಲ್ ಸ್ಟೂಡಿಯೋ ಹೊಂದಿ ವಾಣಿಜ್ಯ ಕಲಾ ಕಾಯಕ ಮಾಡುತ್ತಿದ್ದಾರೆ. ವೃತ್ತಿಯ ಆಚೆಯೂ ಸಮುದಾಯದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಪ್ರೀತಿಯಿಂದ ಅನೇಕ ಮಹನೀಯ ಸಾಧಕರ ಚಿತ್ರಗಳನ್ನು ವರ್ಣದಲ್ಲಿ ಬಿಂಬಿಸುತ್ತಿದ್ದಾರೆ.
ಶಶಿಕಾಂತ್ ಅವರು ಈ ಹಿಂದೆ ಕಿರುತರೆಯಲ್ಲಿ ಸ್ಟಿಲ್ ಛಾಯಾಗ್ರಾಹಕರಾಗಿ ಹಾಗೂ ಕಲಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಹೃದಯಿ ಕಲಾವಿದ, ಬಣ್ಣಾ ಆರ್ಟ್ ಖ್ಯಾತಿಯ ಶಶಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday to Banna Art fame Shashikanth Sir 🌷🙏🌷
ಕಾಮೆಂಟ್‌ಗಳು