ಪ್ರವೀಣ್ ಡಿ ರಾವ್
ಪ್ರವೀಣ್ ಡಿ ರಾವ್
ಸಂಗೀತದಲ್ಲಿ, ಸುಗಮ ಸಂಗೀತದಲ್ಲಿ, ನೃತ್ಯ ಸಂಗೀತದಲ್ಲಿ, ರಂಗ ಸಂಗೀತದಲ್ಲಿ, ಸಿನಿಮಾ ಸಂಗೀತದಲ್ಲಿ, ಧಾರಾವಾಹಿ ಸಂಗೀತದಲ್ಲಿ ಹೀಗೆ ಅನೇಕ ಸಂಗೀತ ರೂಪಗಳಲ್ಲಿ, ಸಂಗೀತಗಾರರಾಗಿ, ವಾದ್ಯಕಾರರಾಗಿ, ಸಂಯೋಜಕರಾಗಿ, ಗೀತ ರಚನಾಕಾರರಾಗಿ, ಆಯೋಜಕರಾಗಿ ಹೀಗೆ ಎಲ್ಲವೂ ಒಬ್ಬರೇ ಆಗಿರುವುದು ಸಾಧ್ಯವೇ? ಹಾಗಿರುವ ಒಬ್ಬರಿದ್ದಾರೆ. ಅವರು ನಮ್ಮ ಕನ್ನಡಿಗರು. ಅವರೇ ಸಕಲ ಸಂಗೀತ 'ಪ್ರವೀಣ' ನಮ್ಮ ಹೆಮ್ಮೆಯ ಪ್ರವೀಣ್ ಡಿ. ರಾವ್.
ಪ್ರವೀಣ್ ಡಿ. ರಾವ್ ಅವರು ಸಂಗೀತದಲ್ಲಿ ಹೆಸರಾಗಿರುವುದು ಮಾತ್ರವಲ್ಲ, ಸಾಧಕರಿಗೆ, ಹಿರಿಯರಿಗೆ, ಕಿರಿಯರಿಗೆ, ಸಾಮಾನ್ಯರಿಗೆ, ಸಮಾಜಕ್ಕೆ ಗೌರವ ಕೊಡುವುದರಲ್ಲೂ ಒಳ್ಳೆಯ ಹೆಸರು.
ಪ್ರವೀಣ್ ಡಿ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ. ಕಲೆಗೆ ನೀವು ಹೆಮ್ಮೆ. ನಮಗೆ ನೀವೂ ಹೆಮ್ಮೆ.
Happy birthday Praveen D Rao Sir
ಕಾಮೆಂಟ್‌ಗಳು