ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಎಸ್. ಗೊರವರ

 

ಟಿ.ಎಸ್. ಗೊರವರ


ಸಂಪಾದಕರೂ, ಪ್ರಕಾಶಕರೂ, ಬಹುಮುಖಿ ಬರಹಗಾರರೂ ಆದ ಟಿ.ಎಸ್. ಗೊರವರ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

ಗೊರವರ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರು.  ಇವರು ರಾಜೂರ ಗ್ರಾಮ, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ ನಡೆಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

'ಭ್ರಮೆ' ಕಥಾ ಸಂಕಲನ, 'ಆಡು ಕಾಯೋ ಹುಡುಗನ ದಿನಚರಿ' ಅನುಭವ ಕಥನ, 'ಕುದರಿ ಮಾಸ್ತರ' ಕಥಾ ಸಂಕಲನ, 'ರೊಟ್ಟಿ ಮುಟಗಿ' ಕಾದಂಬರಿ, 'ಮಲ್ಲಿಗೆ ಹೂವಿನ ಸಖ' ಕಥಾ ಸಂಕಲನ, 'ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ' ಗದ್ಯ ಕವಿತೆಗಳು, 'ಬರವಣಿಗೆಯ ತಾಲೀಮು' ಬರಹಗಾರರ ಸಿದ್ಧತೆಯ ಸೋಜಿಗಗಳು,  'ಮಲ್ಲಿಗೆ ಹೂವಿನ ಸಖ ಮತ್ತು ಚವರಿ' ಎರಡು ನಾಟಕಗಳು ಗೊರವರ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.

ಟಿ.ಎಸ್. ಗೊರವರ ಅವರು 'ಅಕ್ಷರ ಸಂಗಾತ' ಎಂಬ ಸಾಹಿತ್ಯ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. 'ಸಂಗಾತ ಪುಸ್ತಕ' ಎಂಬ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದಾರೆ.

ಪ್ರತಿಭಾನ್ವಿತ ಯುವ ಸಾಹಸಿ ಟಿ. ಎಸ್. ಗೊರವರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday T.s. Goravar 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ