ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಸುಮಾ ಶಾನಭಾಗ


 ಕುಸುಮಾ ಶಾನಭಾಗ

ಕುಸುಮಾ ಶಾನಭಾಗ ಅವರು ಬರಹಗಾರ್ತಿಯಾಗಿ, ಪತ್ರಕರ್ತೆಯಾಗಿ, ಚಿಂತಕಿಯಾಗಿ ಹೆಸರಾಗಿದ್ದರು.

ಮಹಾನ್ ಸಾಹಿತಿ ಭಾರತೀಸುತರ ಸುಪುತ್ರಿಯಾದ ಕುಸುಮಾ ಶಾನಭಾಗ ಅವರು ಮೂಲತಃ ಕೊಡಗಿನವರು.  ಪ್ರಜಾವಾಣಿ ದಿನಪತ್ರಿಕೆಯಲ್ಲಿ ಉದ್ಯೋಗ ಮಾಡಿ  ಸ್ವಯಂ ನಿವೃತ್ತಿ ಪಡೆದಿದ್ದರು.

ಕುಸುಮಾ ಅವರು ಲೈಂಗಿಕ ಕಾರ್ಯಕರ್ತರ ಕುರಿತು ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಅಧ್ಯಯನ ನಡೆಸಿದ್ದರು.  ’ಕಾಯದ ಕಾರ್ಪಣ್ಯ' ಎಂಬ ಇವರ  ಲೈಂಗಿಕ ಕಾರ್ಯಕರ್ತೆಯರ ಕುರಿತಾದ  ಕಥನ 'ಕೆಂಡಸಂಪಿಗೆ’ಯಲ್ಲಿ ಮೂಡಿಬಂದಿತ್ತು.  'ನೆನಪುಗಳ ಬೆನ್ನೇರಿ”ಎಂಬುದು ಇವರ ಕಥಾಸಂಕಲನ.  ’ಮಣ್ಣಿಂದ ಎದ್ದವರು’ ಎಂಬ ಕಾದಂಬರಿ ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯಿಂದ ಪ್ರಕಟಗೊಂಡಿತ್ತು. ಇದು ಸ್ತ್ರೀ ಸಮುದಾಯದ ಒಳಕಾಳಜಿಗಳ ಮಹತ್ವದ ಕೃತಿಯೆನಿಸಿದೆ.

ಕ್ಯಾನ್ಸರ್ ತೊಂದರೆಗೀಡಾಗಿದ್ದ ಕುಸುಮಾ ಶಾನಭಾಗ ಅವರು 2025 ಜೂನ್‌ 22 ರಂದು ಬೆಂಗಳೂರಿನಲ್ಲಿ  ನಿಧನರಾದರು.


Respects to departed soul writer Kusuma Shanbagh 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!