ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ವಿ. ಪ್ರಹ್ಲಾದ್


 ಡಿ. ವಿ. ಪ್ರಹ್ಲಾದ್ 


ಡಿ. ವಿ. ಪ್ರಹ್ಲಾದ್ ಬರಹಗಾರರಾಗಿ ಹಾಗೂ ಪ್ರಸಿದ್ಧ 'ಸಂಚಯ' ಸಾಹಿತ್ಯ ಪತ್ರಿಕೆಯ ಸುದೀರ್ಘ ಮೂರು ದಶಕಗಳ ಅವಧಿಯ ಸಂಪಾದಕರಾಗಿ ಹೆಸರಾದವರು.

ಆಗಸ್ಟ್ 11, ಡಿ. ವಿ. ಪ್ರಹ್ಲಾದ್ ಅವರ ಜನ್ಮದಿನ.   ಇವರು ಮೂಲತಃ ಬೆಂಗಳೂರಿನವರು. 

'ಡೀಮರ್', 'ನಾಳೆಯಿಂದ', 'ದಯಾ... ನೀ ಭವಾ... ನೀ', 'ಹೊಳೆದದ್ದು ತಾರೆ',  'ಅನುದಿನವಿದ್ದು', ‘ಮುಕ್ತ ಛಂದ', 'ಬಗೆ ತೆರೆದ ಬಾನು', 'ಬೊಂಬಾಟ್ ಜಪಾನಿನಲ್ಲಿ ಹತ್ತು ದಿನ' ಮುಂತಾದವು ಪ್ರಹ್ಲಾದ್ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.  'ಎ. ಕೆ. ರಾಮಾನುಜನ್ ಹೆಜ್ಜೆಗುರುತು' ಇವರ ಸಹ ಸಂಪಾದಿತ ಕೃತಿ.

'ಸಂಚಯ’ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಪ್ರಹ್ಲಾದ್ ಅವರು ಸಲ್ಲಿಸಿದ ಮೂರು ದಶಕದ ಸೇವೆ ಕನ್ನಡ ಸಾಹಿತ್ಯಲೋಕಕ್ಕೆ ಸಂದ ಅಮೂಲ್ಯ ಕೊಡುಗೆ.  ಅಂತರಜಾಲ ಪತ್ರಿಕೆಯಾದ 'ನಸುಕು.ಕಾಮ್'ನ ಸಂಪಾದಕರಾಗಿಯೂ ಇವರ ಸೇವೆ ಸಂದಿದೆ. ಕನ್ನಡದ ಅನೇಕ ಯುವಪ್ರತಿಭೆಗಳನ್ನು ಬೆಳೆಸಿದ ಹಿರಿಮೆ ಇವರದ್ದು. 

ಹಿರಿಯರಾದ ಡಿ. ವಿ. ಪ್ರಹ್ಲಾದ್ ಅವರಿಗೆ ಒಂದು ದಿನ ತಡವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Belated happy birthday Prahlad Rao Sir🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ