ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಲಿತಾ ರೈ


 ಆರ್. ಲಲಿತಾ ರೈ ನಮನ

Respects to departed soul Kannada and Tulu writer R.Lalitha Rai 🌷🙏🌷

ಹಿರಿಯ ಸಾಹಿತಿ ಆರ್. ಲಲಿತಾ ರೈ ನಿಧನರಾದ ಸುದ್ದಿ ಬಂದಿದೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. 

ಲಲಿತಾ ರೈ ಅವರು 1928ರ ಆಗಸ್ಟ್ 22ರಂದು ಮಂಗಳೂರಿನ ಕೊಡಿಯಾಲ ಬೈಲಿನಲ್ಲಿ ಜನಿಸಿದರು.

ಲಲಿತಾ ರೈ ಅವರು  ಪ್ರೌಢಶಾಲೆಯ ನಿವೃತ್ತ ಅಧ್ಯಾಪಕಿಯಾಗಿದ್ದರು. 

ಉತ್ತಮ ಬರಹಗಾರ್ತಿಯಾಗಿದ್ದ ಲಲಿತಾ ರೈ ಅವರ ಬರಹಗಳು ಜನಪ್ರಿಯ ನಿಯತಕಾಲಿಕಗಳಲ್ಲಿ ಬೆಳಕು ಕಂಡಿದ್ದವು. ವಿಶ್ವದಾದ್ಯಂತ ಸಂಚರಿಸಿದ್ದ ಅವರು ತಮ್ಮ ಆಳವಾದ ಅನುಭವಗಳ ಅನುಭೂತಿಯನ್ನು ತಮ್ಮ ಬರಹಗಳಲ್ಲಿ ತಂದಿದ್ದರು.  ಅವರ ಪ್ರಕಟಿತ ಕನ್ಜಡ ಕೃತಿಗಳಲ್ಲಿ 'ಚಿತ್ತಗಾಂಗಿನ ಕ್ರಾಂತಿವೀರರು', 'ಕನ್ನಡ ಸಣ್ಣ ಕತೆಗಳ ಸಂಕಲನ', 'ಮತ್ತೆ ಬೆಳಗಿತು', 'ಸೊಡರು ಮತ್ತು ಇತರ ಕಥೆಗಳು', 'ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕತೆಗಳು',  'ತುಳು ಸಣ್ಣಕತೆಗಳ ಸಂಕಲನ-1' ಮುಂತಾದವು ಸೇರಿವೆ. 'ದೇಸಾಂತರ’, 'ಬೋಂಟೆ ದೇರೆಂಡ್’ ಅವರ ತುಳು ಕಾದಂಬರಿಗಳು.

ಲಲಿತಾ ರೈ ಅವರ ‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕಥೆಗಳು’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ತ್ರಿವೇಣಿ ಪುರಸ್ಕಾರ, ನಿರತ ಸಾಹಿತ್ಯ ಸಂಪದ ಸಂಸ್ಥೆಯಿಂದ ‘ಓಟು ಯಾರಿಗೆ’ ಕತೆಗೆ ಮೊದಲ ಬಹುಮಾನ, ದಕ್ಷಿಣ‍ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ' ಮುಂತಾದ ಹಲವು ಗೌರವಗಳು ಸಂದಿದ್ದವು.

ಅಗಲಿದ ಹಿರಿಯ ಸಾಹಿತ್ಯ ಚೇತನಕ್ಕೆ ನಮ್ರ ನಮನ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ