ಜಹೀರ್ ಖಾನ್
ಜಹೀರ್ ಖಾನ್
ಜಹೀರ್ ಖಾನ್ ಭಾರತೀಯ ಕ್ರಿಕೆಟ್ ಲೋಕದ ಅತ್ಯುತ್ತಮ ಬೌಲರುಗಳಲ್ಲೊಬ್ಬರು.
ಜಹೀರ್ ಖಾನ್ 1978ರ ಅಕ್ಟೋಬರ್ 8ರಂದು ಮಹಾರಾಷ್ಟ್ರದ ಶ್ರೀರಾಮ್ಪರ್ ಎಂಬಲ್ಲಿ ಜನಿಸಿದರು.
2000ದ ಇಸವಿಯಲ್ಲಿ ಶ್ರೀಲಂಕಾ ತಂಡದ ವಿರುದ್ದ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಜಹೀರ್ 2014 ವರ್ಷದ ಅವಧಿಯವರೆಗೆ 92 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ಟುಗಳನ್ನು ಮತ್ತು 200 ಏಕದಿನ ಪಂದ್ಯಗಳಲ್ಲಿ 282 ವಿಕೆಟ್ಟುಗಳನ್ನು ಗಳಿಸಿದ್ದರು.
2008 ವರ್ಷದಲ್ಲಿ ಜಹೀರ್ ಖಾನ್ ವಿಸ್ಡನ್ ಕ್ರಿಕೆಟಿಯರ್ ಆಫ್ ದ ಇಯರ್ ಗೌರವಕ್ಕೆ ಪಾತ್ರರಾಗಿದ್ದರು. ಎಡಗೈ ಫಾಸ್ಟ್ - ಮೀಡಿಯಂ ಬೌಲರ್ ಆಗಿದ್ದ ಇವರು ಎರಡೂ ಕಡೆಯ ಸ್ವಿಂಗ್ ಹಾಗೂ ಹಳೆಯ ಚೆಂಡಿನಲ್ಲೂ ಒಂದಷ್ಟು ಬಿರುಸು ತರುವ ವಿಶೇಷ ಕೌಶಲ್ಯದಿಂದ ಹೆಸರಾಗಿದ್ದರು.
ಜಹೀರ್ ಖಾನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of excellent bowler Zaheer Khan 🌷🌷🌷

ಕಾಮೆಂಟ್‌ಗಳು