ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೌಮ್ಯಾ ರಾಮಮೋಹನ್

 ಸೌಮ್ಯಾ ರಾಮಮೋಹನ್


ವೃತ್ತಿಯಿಂದ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಡಾ. ಸೌಮ್ಯಾ ರಾಮಮೋಹನ್ ಅವರು ಸಂಗೀತ ಕ್ಷೇತ್ರದಲ್ಲಿ ವಿದುಷಿಯಾಗಿ ಸಂಗೀತ ಸೇವೆ ಹಾಗೂ ಭಗವಂತನ ಸಂಕೀರ್ತನ ಉಪನ್ಯಾಸಗಳನ್ನು ನೀಡುತ್ತ ಬಂದಿದ್ದಾರೆ. ಇವರ ಕಾರ್ಯಕ್ರಮಗಳು ಪ್ರತಿಷ್ಠಿತ ವೇದಿಕೆಗಳಲ್ಲಿ ಮಾತ್ರವಲ್ಲದೆ ಯೂಟ್ಯೂಬ್ ಮತ್ತು ಫೇಸ್ಬುಕ್ ಅಂತಹ ಸಮೂಹ ಮಾಧ್ಯಮಗಳಲ್ಲೂ ಖ್ಯಾತಿ ಗಳಿಸಿವೆ.  

ಕನ್ನಡ ಮತ್ತು ಸಂಸ್ಕೃತದಲ್ಲಿ ಬಹುಮುಖಿ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆಗಳಲ್ಲೂ ಕ್ರಿಯಾಶೀಲರಾಗಿರುವ ಸೌಮ್ಯಾ ಅವರಿಗೆ "ಸಂಗೀತ ಶಾಸ್ತ್ರ ಗ್ರಂಥಾನುಸಂಧಾನ - ಒಂದು ಅಧ್ಯಯನ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಶ್ರೀವಿದ್ಯಾ ಇಂಟರ್ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸಸ್ ಇಂದ ಡಾಕ್ಟರೇಟ್ ಗೌರವ ಸಂದಿದೆ. ಕೇಂದ್ರ ಸರ್ಕಾರದ Centre for Cultural Resources and Trainingನಲ್ಲಿ ಸೀನಿಯರ್ ರಿಸರ್ಚ್ ಫೆಲೊ ಆಗಿ ಸಹಾ ಇವರ ಸೇವೆ ಸಲ್ಲುತಿದೆ.

ಬಹುಮುಖಿ ಸಾಧಕರೂ, ಸಹೃದಯರೂ ಆದ ವಿದುಷಿ ಸೌಮ್ಯಾ ರಾಮಮೋಹನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vidushi &
Sowmya RamMohan🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!