ಬುಧವಾರ, ಸೆಪ್ಟೆಂಬರ್ 11, 2013

ತೇರಾ ಏರಿ ಅಂಬರದಾಗೆ ನೇಸರ ನಗುತಾನೆ

ತೇರಾ ಏರಿ ಅಂಬರದಾಗೆ ನೇಸರ ನಗುತಾನೆ
ಮರಗಿಡ ತೂಗ್ಯಾವೆ-ಹಕ್ಕಿ ಹಾರ್ಯಾವೇ
ಬೀರ್ಯಾವೇಚೆಲುವಬೀರ್ಯಾವೇ
ಬಾ ನೋಡಿ ನಲಿಯೋಣ ತಮ್ಮಾ

ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ
ಆ ಹೂವಿನ ತುಂಬ ಸಣ್ಣ ಚಿಟ್ಟೆ ಕುಂತಾವೆ
ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೆವನವೇ ನಕ್ಕು ಹಣ್ಣು ತಂದಾವೆ
ಕುಂತರೆ ಸೆಳೆವಾ ಸಂತಸ ತರುವಾ
ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೆ

ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆರೆದಾವ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದಾವೆ
ಸಾಲುಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನದ ಗಾನ ಎಲ್ಲರ ಮನಸ ಸೆಳೆದಾವೆ
ಭಾವ ಬಿರಿದು ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ

ಭೇದ ಭಾವ ಮುಚ್ಚುಮರೆ ಒಂದೂ ಮಾಡ್ದೇನೆ
ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
ಪ್ರೀತಿ ಬೆಳೆದು ಸ್ನೇಹ ತಳೆದು
ನಗ್ತಾ ನಗ್ತಾ ನಾವು ನೀವು ಸವಿಯುವ ಸುಖವನ್ನೇ

ಚಿತ್ರ: ಪರಸಂಗದ ಗೆಂಡೆತಿಮ್ಮ
ಗೀತ ರಚನೆ: ದೊಡ್ಡರಂಗೇಗೌಡ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್-ನಾಗೇಂದ್ರ

ಈ ಗೀತೆ ಸುಶ್ರಾವ್ಯ ವೇಣುವಾದನದಲ್ಲಿ ಇಲ್ಲಿದೆ.  ಸಿನಿಮಾ ವಿಡಿಯೋ ಸದ್ಯಕ್ಕೆ ಲಭ್ಯವಿಲ್ಲ


Tag: Tera Eri Ambaradage Nesara Nagutane

ಕಾಮೆಂಟ್‌ಗಳಿಲ್ಲ: