ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಯಕೆ, ಬಳ್ಳಿ, ಚಿಗುರಿ, ನಗುತಿದೆ
ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂತ ಬೆಳಕು ಬರಲಿದೆ
ಬಯಕೆ ಬಳ್ಳಿ ಚಿಗುರಿ ನಗುತಿದೆ
ಮಂದಹಾಸ ಬೀರುತಾ ಮಧುಚಂದಿರ ಬಂದ
ಧರೆಗೆ ಜೇನ ಹನಿಯನೆರೆದು ಸಂತಸವನೆ ತಂದ
ಎಂಥ ಒಲವು ಎಂಥ ನಲಿವು ಈ ಅನುಬಂಧ
ಏನು ಅಂದ ಎನಿತು ಚಂದ ಅನುರಾಗದ ಬಂಧ
ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂತ ಬೆಳಕು ಬರಲಿದೆ
ಬಯಕೆ ಬಳ್ಳಿ ಚಿಗುರಿ ನಗುತಿದೆ
ಲತೆಯು ನಿನ್ನ ಮುಡಿಯೆ ತನ್ನ
ಕೊಡುಗೆಯನ್ನು ನೀಡಿದೆ
ರಸಿಕರೊಲುಮೆಯಿಂದ ಜನುಮ ಸಫಲತೆಯನು
ಹೊಂದಿದೆ
ಅಯ್ಯೋ ಪಾಪ, ನಮ್ಮ ಹಿತಕೆ ಹೂವಿನ
ಬಲಿದಾನವೇ
ತಾಯಿ ಮಡಿಲಿನಿಂದ ಮನವ ದೂರಾಗಿಸೆ
ನ್ಯಾಯವೇ
ಬಯಕೆ ಬಳ್ಳಿ ಚಿಗುರಿ ನಗುತಿದೆ
ನಗೆಯು ನೋವು ಬೆಸುಗೆಯಿಂದ ಜೀವಧರ್ಮ
ಉದಿಸಿದೆ
ಇದುವೆ ಕರ್ಮ ಇದುವೆ ಮರ್ಮ ಎಂದು ಲತೆಯು ಹಾಡಿದೆ
ಪ್ರೇಮಪೂರ್ಣ ಜೀವಿಗಳಿಗೆ ಎಲ್ಲವು
ಜೇನಾಗಿದೆ
ನಮ್ಮ ಹೃದಯ ತಾನದಲ್ಲಿ ದೇವರ ದಯೆಕೋರಿದೆ
ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂತ ಬೆಳಕು ಬರಲಿದೆ
ಬಯಕೆ ಬಳ್ಳಿ ಚಿಗುರಿ ನಗುತಿದೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಆರ್. ಸುದರ್ಶನಂ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು
ಎಸ್. ಜಾನಕಿ
ಕಾಮೆಂಟ್‌ಗಳು