ಶನಿವಾರ, ಸೆಪ್ಟೆಂಬರ್ 7, 2013

ಮೂಡಣದ ಅರಮನೆಯ ಕದವು ತೆರೆಯುತಿರೆ

ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ
ಮರೆಯಾದಳು ನಿಷೆ

ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ

ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು
ನಾದ ಕೇಳಿ ಮೊಗ್ಗು ಹೂವಾಗಿದೆ
ಹೂವೂ ನಗಲು ಅದರ ಜೇನ ಒಡಲು
ಕಂಡು ದುಂಬಿ ಹಾರಾಡಿದೆ
ಬೆಳಕು ಮೂಡುತಿದೆ
ಸೊಗಸು ಕಾಣುತಿದೆ
ಹೊಸತು ಜೀವ ತುಂಬುವಂತೆ
ಬಾನಿನ ಅಂಚಿಂದ ಬಂದೆ ನಿನ್ನ ಕಂಡೆ
ಒಲವಿಂದ ಇಂಪಾಗಿ ಉದಯರಾಗ ಹಾಡುತಿರಲು

ಎಲೆಯ ಮೇಲೆ ಹಿಮದ ಮಣಿಯ ಸಾಲು
ಬೆಳಕ ಕಂಡು ಹೊಳೆವ ಮುತ್ತಾಗಿದೆ
ಮರದ ಮೇಲೆ ಕುಳಿತ ಗಿಳಿಯ ಸಾಲು
ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ
ಕಡಲ ಅಲೆಅಲೆಯು
ಚಿಮ್ಮಿ ಕುಣಿಯುತಿರೆ
ಭುವಿಯ ಅಂದ ಕಾಣಲೆಂದು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ

ಚಿತ್ರ: ಶ್ರಾವಣ ಬಂತು
ಸಾಹಿತ್ಯ:  ಚಿ, ಉದಯಶಂಕರ
ಸಂಗೀತ: ಎಂ ರಂಗರಾವ್
ಗಾಯನ: ರಾಜ್ ಕುಮಾರ್ ಮತ್ತು ವಾಣಿ ಜಯರಾಂTag: Baanina anchinda bande, banina anchinda bande

ಕಾಮೆಂಟ್‌ಗಳಿಲ್ಲ: