ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀ ಚಾಮುಂಡೇಶ್ವರೀ ಅಮ್ಮ

ಶ್ರೀ ಚಾಮುಂಡೇಶ್ವರೀ
 ಅಮ್ಮ ಶ್ರೀ ಚಾಮುಂಡೇಶ್ವರೀ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ
ಶ್ರೀ ಚಾಮುಂಡೇಶ್ವರೀ
ಹರನೇ ತಾನೊಲಿದ ಶೃಂಗಾರ ಲಹರಿ,
ಹರಿಯೆ ಮರುಳಾದ ಮಹದೈಸಿರಿ
ಬ್ರಹ್ಮನೆ ಬೆರಗಾದ ವಾಗ್ವೈಕರಿ,
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ,
ಶ್ರೀ ಚಾಮುಂಡೇಶ್ವರೀ 
ಅಮ್ಮ ಶ್ರೀ ಚಾಮುಂಡೇಶ್ವರೀ

ನಾಡಾಳೊ ರಾಯರ ರಾಜೇಶ್ವರಿ,
ಬೇಡಿದ ವರ ನೀಡು ಭಾಗ್ಯೇಶ್ವರಿ
ಒಡೆಯರ ಪಾಲಿಸು ಪರಮೇಶ್ವರೀ
ಕರ್ಣಾಟ ಸಾಮ್ರಾಜ್ಯ ಕಾಮೇಶ್ವರಿ 
ಶ್ರೀ ಚಾಮುಂಡೇಶ್ವರೀ 
ಅಮ್ಮ ಶ್ರೀ ಚಾಮುಂಡೇಶ್ವರೀ

ಚಿತ್ರ: ಶ್ರೀಕೃಷ್ಣದೇವರಾಯ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಲೀಲಾ


Tag: Sri chamundeswari amma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ