ಶನಿವಾರ, ಸೆಪ್ಟೆಂಬರ್ 7, 2013

ಮತ್ತೊಮ್ಮೆ ಮೂಡಿ ಬಾ

ಮತ್ತೊಮ್ಮೆ ಮೂಡಿ ಬಾ


ಭೋರ್ಗರೆವ ಕಡಲಿನೊಡಳಿಗೆ ಧುಮುಕಿ
ತೆರೆಗಳ ಸೀಳಿ, ನಡುಗಡ್ಡೆಯಲಿ ನಿಂತು
ಭಾರತದ ಕನಸ ಕಂಡವ ನೀನು.  ನಿನ್ನ
ವರ್ಷಕಾಲ ರುದ್ರ – ರಮಣೀಯ ಛಂದೋಗತಿಗೆ
ಮೂಕವಾಗಿದೆ ಲೋಕ! ಭೋರೆಂದು ಮಳೆ ಹೊಯ್ದ,
ಹೊಳೆ – ಹಳ್ಳಗಳಲಿ ನೊರೆಗರೆದು, ಹೊಲ – ಗದ್ದೆ
ಗಳಲ್ಲಿ ಸೊಂಪಾಗಿ ಹಸುರು ತಾಗಿದ ಹಾಗೆ
ನಿನ್ನ ಮಾತಿನ ರೀತಿ.  ನುಡಿದ ನುಡಿಯೊಂ-
ದೊಂದು ಸಿಡಿಲ ಕಿಡಿ; ನಡೆ, ಪೌರುಷದ
ತೇರು ಹರಿದಂತೆ,  ನಮ್ಮ ಇಂದಿನ ಬದುಕೊ,
ವಿವೇಕ – ಆನಂದ ಎರಡೂ ಇರದ ಕುಹಕದ
ಸಂತೆ.  ಮತ್ತೊಮ್ಮೆ ಮೂಡಿ ಬಾ, ದಿವ್ಯ ನಿರ್ಭಯ
ಧೀರ ಗುರುಮೂರ್ತಿ.  ಬೇಕಾಗಿದೆಯಯ್ಯ, ನಮ್ಮ
ಈ ಸತ್ತ ದೇಶಕ್ಕೆ ನಿನ್ನ ಸಾತ್ವಿಕ ಸ್ಫೂರ್ತಿ  

ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ

Tag: mattomme mudiba, mattomme moodiba

ಕಾಮೆಂಟ್‌ಗಳಿಲ್ಲ: