ಶನಿವಾರ, ಸೆಪ್ಟೆಂಬರ್ 7, 2013

ಬಾನಿಗೊಂದು ಎಲ್ಲೆ ಎಲ್ಲಿದೇ

ಬಾನಿಗೊಂದು ಎಲ್ಲೆ ಎಲ್ಲಿದೇ, ನಿನ್ನಾಸೆಗೆಲ್ಲಿ ಕೊನೆ ಇದೆ
ಏಕೆ ಕನಸು ಕಾಣುವೇ, ನಿಧಾನಿಸು ನಿಧಾನಿಸು.

ಆಸೆಯೆಂಬ ಬಿಸಿಲುಕುದುರೆ ಏಕೆ ಏರುವೆ,
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದೂ
ನಾವು ನೆನೆಸಿದಂತೆ ಬಾಳಲೇನೂ ನಡೆಯದು
ವಿಷಾದವಾಗಲೀ, ವಿನೋದವಾಗಲೀ
ಅದೇನೆ ಆಗಲೀ, ಅವನೆ ಕಾರಣ.

ಹುಟ್ಟುಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ,
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ.
ದುರಾಸೆ ಏತಕೆ, ನಿರಾಸೆ ಏತಕೇ,
ಅದೇನೆ ಬಂದರೂ ಅವನ ಕಾಣಿಕೆ

ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯನ: ರಾಜ್ ಕುಮಾರ್


Tag: Banigondu Elle ellide baanigondu elle ellide

ಕಾಮೆಂಟ್‌ಗಳಿಲ್ಲ: