ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ

ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ನಂತರಂಗ ಮಧುರಂಗ
ಆಹಾ ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ನಂತರಂಗ ಮಧುರಂಗ

ಬಳಿ ನೀನಿರಲು  ಬಿಸಿಲೇ ನೆರಳು
ಮಧುಪಾನ ಪಾತ್ರೆ ನಿನ್ನೊಡಲು
ಮಧುನಿಲ್ಲದೇ ಮದವೇರಿಪ
ನಿನ್ನ ಅಂದ ಚೆಂದ ಮಕರಂದ
ಆಹಾ ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ನಂತರಂಗ ಮಧುರಂಗ

ನಿನ್ನೀ ವದನ ಅರವಿಂದವನ
ಹೂಬಾಣ ನಿನ್ನ ಭಿನ್ನಾಣ
ಒಲವೆಂಬ ಧನ ಬಿಡೆ ಹುಂಬತನ
ಬಾ ಚಿನ್ನ ರನ್ನ ವರಿಸೆನ್ನ
ಆಹಾ ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ  ನಿನ್ನಂತರಂಗ ಮಧುರಂಗ

ಚಿತ್ರ: ಕನ್ಯಾರತ್ನ
ಸಾಹಿತ್ಯ: ಕು.ರಾ. ಸೀತಾರಾಮ ಶಾಸ್ತ್ರಿ
ಗಾಯನ : ಪಿ.ಬಿ. ಶ್ರೀನಿವಾಸ್
ಸಂಗೀತ: ಜಿ.ಕೆ. ವೆಂಕಟೇಶ್


Tag: Binkada Singari mai donkina vaiyyari, vayyari

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ