ಮಂಗಳವಾರ, ಸೆಪ್ಟೆಂಬರ್ 3, 2013

ನಿನ್ನ ಹೆಸರೇ ಹೇಳುವಂತೆ


ನಿನ್ನ ಹೆಸರೇ ಹೇಳುವಂತೆ 
ನೀನು ಒಂದು ಹೂವಿನಂತೆ
ಮೃಧು ಮಧುರ ಬಂಧುರಾ
ನಿನ್ನ ಹೆಸರೆ ಮಂದಿರ

ಲೆಕ್ಕವಿರದ ಚಿಕ್ಕೆಗಡಣ 
ಸುತ್ತ ನಡುವೆ ಚೆಂದಿರ
ಬಾನಿನಲ್ಲಿ ರಂಗವಲ್ಲಿ 
ನಿನ್ನ ಕನಸು ಸುಂದರ

ಹೂವ ಜೇನು ಸೇರುವಂತೆ
ನೀನು ಒಂದು ಹೂವಿನಂತೆ
ಮೃದು ಮಧುರ ಬಂಧುರ
ನಿನ್ನ ಮನಸು ಮಂದಿರ

ಕುಸುಮಿಸಿದಲು ಹರುಷ ಲತೆಯೇ 
ಉದಯಿಸಿರುವೆ ಬಾಳ ಸ್ಮಿತವೇ
ಘಮ ಘಮಿಸುತ ಅರಳೊ ಮುಗುಳೆ
ಕಂಪು ಚೆಲುವು ನಲಿವ ಸಿರಿಯೇ

ಹಾಡುತಿರು ಹಕ್ಕಿಯಂತೆ 
ನೀನು ಒಂದು ಹೂವಿನಂತೆ
ಮೃಧು ಮಧುರಾ ಬಂಧುರ
ನಿನ್ನ ಹೆಸರೇ  ಮಂದಿರ

ಸಾಹಿತ್ಯ: ರಾಘವೇಂದ್ರ ಇಟಗಿ

Tag: Ninna hesare heluvante

ಕಾಮೆಂಟ್‌ಗಳಿಲ್ಲ: