ಭಾನುವಾರ, ಸೆಪ್ಟೆಂಬರ್ 8, 2013

ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ


ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ
ಹೋಗೋಣ ಬನ್ನಿರೋ ಹೊಸ ನಾಡಿಗೆ.
ಹೊಚ್ಚ ಹೊಸ ನೋಟಕ್ಕೆ
ಅಚ್ಚ ಬಾಳಾಟಕ್ಕೆ
ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ.

ಕುರುಡುಗಟ್ಟುತ ನಮ್ಮ ಜೊತೆಗೂಡಿಬರುವ
ಹುದ್ದೆಗಳ ಹಿಂದಿಟ್ಟು ನಾವೆಲ್ಲ ನಗುವ
ನೆಮ್ಮ ವೇಗದಿ ಸಾಗಿ ಮುಗಿಲು ರವಿಯೆಲ್ಲ
ಒಕ್ಕೊಟಗೈದೆರಲಿ ದಿಕ್ಕು ದೆಸೆಯೆಲ್ಲ.
ಹೋಗೋಣ ಬನ್ನಿರೋ ಹೊಸ ನಾಡಿಗೆ.

ಬೆರಗುನೋಟದ ಹಳ್ಳಿ ಮಂದಿಗಳ ಕೂಟ
ಬೆಡಗಿನುಡುಪಿನ ಹೊಳಲ ಹೆಣ್ಣುಗಳ ನೋಟ
ಜಡೆಹಳುವು ಗುಡಿಯೆಂದು ಹರಿವ ಕಣ್ನೋಟ
ಅಡಿಗಡಿಗು ಅಹ ಎಂದು ಅಚ್ಚರಿಸುವಾಟ
ಹೋಗೋಣ ಬನ್ನಿರೋ ಹೊಸ ನಾಡಿಗೆ.

ಇಂದು ಯಾಗವವಿದಿ ನಾಳೆ ಹಳೇಬೀಡು
ಹೊಂಗೆದಗದಚ್ಚರಿ ಗೊಮ್ಮಟನ ಮೇಡು
ಕಡಲು ಕರೆಯಲು ಹಿರಿಯ ಕಮರಿಯನೆ ನೆಗೆವ
ಪ್ರಣಯ ರುದ್ರೆಯ ಕಂಡು ಸೋಜಿಗವ ಪಡುವ
ಹೋಗೋಣ ಬನ್ನಿರೋ ಹೊಸ ನಾಡಿಗೆ
ಗಿರಿಯಾಚೆ, ಗಡಿಯಾಚೆ, ಗಿಡದಾಚೆಗೆ
ಹೋಗೋಣ ಬನ್ನಿರೋ ಹೊಸ ಸೀಮೆಗೆ

ಸಾಹಿತ್ಯ: ಪು. ತಿ. ನರಸಿಂಹಾಚಾರ್ಯ


Tag: Gudiyache gadiyache gidadachege, gudiyaache gadiyaache gidadaachege

ಕಾಮೆಂಟ್‌ಗಳಿಲ್ಲ: