ಮಂಗಳವಾರ, ಸೆಪ್ಟೆಂಬರ್ 3, 2013

ಎಲ್ಲೋ ಮಳೆಯಾಗಿದೆಯಂದು

ಎಲ್ಲೋ ಮಳೆಯಾಗಿದೆಯಂದು

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೆ
ನಿನ್ನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ

ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ, ನೀ ಕಾಡಿದರೆ
ನೂತನ ಭಾವದ ಆಗಮನ ನೀ ಬಿಡದೆ, ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೆ
ಈ ಧ್ಯಾನವ ಕಂಡರೆ ದೇವರಿಗು ಕೋಪವು ಬರಬಹುದೆ

ನೆನಪಿನ ಹೂಗಳ ಬೀಸಣಿಕೆ ನೀ ಬರುವ ದಾರಿಯಲಿ
ಓಡೀದೆ ದೂರಕೆ ಬೇಸರಿಕೆ ನೀನಿರುವ ಊರಿನಲಿ
ಅನುಮಾನವೆ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೆ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೆ

ಸಾಹಿತ್ಯ: ಜಯಂತ ಕಾಯ್ಕಿಣಿ 
Photo Courtesy: viscomsjc.blogspot.com

Tag: Ello Maleyagideyendu

ಕಾಮೆಂಟ್‌ಗಳಿಲ್ಲ: