ಗುರುವಾರ, ಸೆಪ್ಟೆಂಬರ್ 5, 2013

ಎದ್ದು ಬರುತಾರೆ ನೋಡೇ


ಎದ್ದು ಬರುತಾರೆ ನೋಡೇ
ಎದ್ದು ಬರುತಾರೆ ನೋಡೇ
ತಾವೆದ್ದು ಬರುತಾರೆ ನೋಡೇ

ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ 

ಕೊರಲೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು
ಚೆಲುವ ಮುಖದೊಳು ಪೊಳೆವ ದಂತಗಳಿಂದ

ಹೃದಯ ಮಂದಿರದಲ್ಲಿ ಪದುಮನಾಭನ
ಭಜಿಸಿ ಮುದಮನದಿಂದ ನಿತ್ಯಸದಮಲರೂಪ ತಾಳಿ

ದಾತ ಗುರು ಜಗನಾಥ ವಿಠಲನ
ಪ್ರೀತಿಯ ಪಡಿಸುತ ದೂತರ ಪೊರೆಯುತ


ಸಾಹಿತ್ಯ: ಜಗನ್ನಾಥ ದಾಸರು

Tag: Eddu barutare node, Eddu barutaare node

ಕಾಮೆಂಟ್‌ಗಳಿಲ್ಲ: