ಗುರುವಾರ, ಸೆಪ್ಟೆಂಬರ್ 5, 2013

ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ
ತಾರೇ ಬಿಂದಿಗೆಯ
ಬಿಂದಿಗೆ ಒಡೆದರೆ ಒಂದೇ ಕಾಸು
ತಾರೇ ಬಿಂದಿಗೆಯ

ರಾಮನಾಮವೆಂಬೋ ರಸವುಳ್ಳ ನೀರಿಗೆ
ತಾರೇ ಬಿಂದಿಗೆಯ
ಕಾಮಿನಿಯರ ಕೂಡ ಏಕಾಂತವಾಡೇನು
ತಾರೇ ಬಿಂದಿಗೆಯ

ಗೋವಿಂದ ಎಂಬೋ ಗುಣವುಳ್ಳ ನೀರಿಗೆ
ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತಪಾನಕ್ಕೆ
ತಾರೇ ಬಿಂದಿಗೆಯ

ಬಿಂದುಮಾಧವನ ಘಟ್ಟಕ್ಕೆ ಹೋಗುವೆ
ತಾರೇ ಬಿಂದಿಗೆಯ , ಪು-
ರಂದರವಿಠಲಗೆ ಅಭಿಷೇಕ ಮಾಡುವೆ
ತಾರೇ ಬಿಂದಿಗೆಯ

ಸಾಹಿತ್ಯ: ಪುರಂದರದಾಸರು


 Photo Courtesy: http://svbebe.blogspot.in/2011/02/few-photos.html


Tag: Tarakka bindige, Taarakka bindige

ಕಾಮೆಂಟ್‌ಗಳಿಲ್ಲ: