ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ
ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ
ತಾರೇ ಬಿಂದಿಗೆಯ
ಬಿಂದಿಗೆ ಒಡೆದರೆ ಒಂದೇ ಕಾಸು
ತಾರೇ ಬಿಂದಿಗೆಯ
ರಾಮನಾಮವೆಂಬೋ ರಸವುಳ್ಳ ನೀರಿಗೆ
ತಾರೇ ಬಿಂದಿಗೆಯ
ಕಾಮಿನಿಯರ ಕೂಡ ಏಕಾಂತವಾಡೇನು
ತಾರೇ ಬಿಂದಿಗೆಯ
ಗೋವಿಂದ ಎಂಬೋ ಗುಣವುಳ್ಳ ನೀರಿಗೆ
ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತಪಾನಕ್ಕೆ
ತಾರೇ ಬಿಂದಿಗೆಯ
ಬಿಂದುಮಾಧವನ ಘಟ್ಟಕ್ಕೆ ಹೋಗುವೆ
ತಾರೇ ಬಿಂದಿಗೆಯ , ಪು-
ರಂದರವಿಠಲಗೆ ಅಭಿಷೇಕ ಮಾಡುವೆ
ತಾರೇ ಬಿಂದಿಗೆಯ
ಸಾಹಿತ್ಯ: ಪುರಂದರದಾಸರು
Photo Courtesy: http://svbebe.blogspot.in/2011/02/few-photos.html
ಕಾಮೆಂಟ್‌ಗಳು