ಭಾನುವಾರ, ಸೆಪ್ಟೆಂಬರ್ 8, 2013

ನಾನು ಪಂಜರದ ಪಕ್ಷಿ


ನಾನು ಪಂಜರದ ಪಕ್ಷಿ
ಇನ್ನು ನನಗಾರು ಗತಿ
ಕೇಳ ಬಯಸುವಿರೇನು ನನ್ನ ಕಥೆಯಾ

ಬಹುದೂರ ಯಾವುದೋ ಪರ್ವತದ ಓರೆಯಲಿ,
ಮರದ ಕಿರು ಹೊದರಿನಲಿ
ಜನಿಸಿ ಬಂದೆ
ಆ ತಂದೆ ತಾಯಿಯರು, ನನ್ನಣ್ಣ ತಂಗಿಯರು 
ಅವರ ಜೊತೆಯಲಿ ನಾನು ನಲಿಯುತಿದ್ದೆ

ಅಲ್ಲಿ ಬನ ಬನದಲ್ಲಿ ಕಾಡ ಗಿಡಗಿಡದಲ್ಲಿ ಕೊಂಬೆ 
ಕೊಂಬೆಗೂ, ಹೂವು ಸಾವಿರಾರು. ಬನದ ಹಣ್ಣಿನ 
ರುಚಿಯ ಬರಿನೆನೆದರೇನುಂಟು ಮರಳಿ ದೊರೆಯಲು 
ಬಹುದೇ ತೌರಿನವರು.

(ಇದು ನನ್ನ ಶಾಲೆಯಲ್ಲಿ ಪದ್ಯವಾಗಿತ್ತು.  ಒಬ್ಬ ಆಂಗ್ಲ ಕವಿಯ ಕವಿತೆಯ  ಅನುವಾದ ಇರಬೇಕು ಎಂಬ ಅಸ್ಪಷ್ಟ ನೆನಪು) 

Tag: Nanu panajarada pakshi, naanu panjarada pakshi

16 ಕಾಮೆಂಟ್‌ಗಳು:

Unknown ಹೇಳಿದರು...

Idu Kannadavare bared padya

Sridhar Nadiger ಹೇಳಿದರು...

ಬಹಳ ಅದ್ಭುತವಾದ ಕವನ. ತುಂಬ ಧನ್ಯವಾದಗಳು ನಿಮಗೆ, ಈ ಪದ್ಯ ನನ್ನ ಅಮ್ಮ ಅವರ ತಮ್ಮ ಬಾಲ್ಯದಲ್ಲಿ ಕಲಿತಂತ ಪದ್ಯ. ನಾವು ಚಿಕ್ಕವರಿದ್ದಾಗ ನಮಗೂ ಕಲಿಸುತ್ತಿದ್ದರು.

Unknown ಹೇಳಿದರು...

ಮನೋಜ್ಞವಾದ ಕವಿತೆ. ನಾವೂ ಇದನ್ನು ಶಾಲೆಯಲ್ಲಿ ಓದಿದ್ದೇವೆ. ಈಗ ನೆನಪು ಮಾಡಿಕೊಳ್ಳಲು ಖುಷಿಯೆನಿಸುತ್ತದೆ.ಈ ಕವಿತೆಯನ್ನು ಬರೆದವರು 'ಸಿದ್ಧಣ್ಣ ಮಸಳಿ'

Unknown ಹೇಳಿದರು...

Thank you..

Unknown ಹೇಳಿದರು...

prakruthi sahajavada,jeevanada sathyavannu,thathvavannu kavi bahala saralavagi ellarigu manamuttuvanthe heliddare

Unknown ಹೇಳಿದರು...

T.R.SUBBA RAO AVARU II PADYA BAREDIDDU.

ತಿರು ಶ್ರೀಧರ ಹೇಳಿದರು...

Pooja Patil ಅವರೇ ಈ ಪದ್ಯದ ಕರ್ತೃವಿನ ಬಗ್ಗೆ ತಿಳಿಸಿ ತುಂಬಾ ಸಹಾಯ ಮಾಡಿದ್ದೀರಿ. ತುಂಬು ಹೃದಯದ ಧನ್ಯವಾದಗಳು. ತಮಗೆ ಈ ಪದ್ಯದ ಪೂರ್ಣ ಪಾಠ ತಿಳಿದಿದ್ದರೆ ದಯವಿಟ್ಟು ಕಳುಹಿಸಿಕೊಡಿ. ಆತ್ಮೀಯ ನಮಸ್ಕಾರ.

Unknown ಹೇಳಿದರು...

ನಾನು ಪಂಜರದ ಪಕ್ಷಿ : ಕವಿ ಡಾl ಸಿದ್ಧಣ್ಣ ಮಸಳಿ.ಅವರು ನಮ್ಮ ಸವದತ್ತಿ KLE society s SidheshwarJr college, ನಲ್ಲಿ ನಮ್ಮ Principal ರಾಗಿದ್ದರು. ನಾನು ಆರನೇ ಕ್ಲಾಸ್ ನಲ್ಲಿದ್ದಾಗ ( ೧೯೭೨ -೧೯೭೩).ಅವರೇ ನಮಗೆ ಈ ಕವಿತೆಯ ಪಾಠ ಮಾಡಿದ್ದರು.ಕವಿಯಿಂದಲೇ ಕವಿತೆ ಕಲಿತ. ನಾವು ಧನ್ಯರು.

raghunandan ಹೇಳಿದರು...

Remembered my school days....Thanks for the lyrics

Professor68 ಹೇಳಿದರು...

giri shikhara jhari neeru swachchanda aakasha,
innomme antha sukha padevenenu
yaara preetiya nambi jeeva hidiyali naanu
arthavillada haada haadalenu

Unknown ಹೇಳಿದರು...

E padyavannu heli naanage first prize bandithu,e poemna naanu egalu maretilla

Unknown ಹೇಳಿದರು...

ಪೂರ್ವಾಹ್ನ
Pooja Patil ಅವರೇ ಈ ಪದ್ಯದ ಕರ್ತೃವಿನ ಬಗ್ಗೆ ತಿಳಿಸಿ ತುಂಬಾ ಸಹಾಯ ಮಾಡಿದ್ದೀರಿ. ತುಂಬು ಹೃದಯದ ಧನ್ಯವಾದಗಳು. ತಮಗೆ ಈ ಪದ್ಯದ ಪೂರ್ಣ ಪಾಠ ತಿಳಿದಿದ್ದರೆ ದಯವಿಟ್ಟು ಕಳುಹಿಸಿಕೊಡಿ. ಆತ್ಮೀಯ ನಮಸ್ಕಾರ.

Unknown ಹೇಳಿದರು...

bahala dinagalinda Manu e kavitje gagi hathoriuthidde, primary school nalli odds nenapu, bahala dhanyavaada

Unknown ಹೇಳಿದರು...

ಬಾಲ್ಯದ ಸುಂದರ ದಿನಗಳ ನೆನಪು ಮಾಡಿದ ಕವನ ಅರ್ಥಪೂರ್ಣವಾಗಿದೆ.ಧನ್ಯವಾದಗಳು

Unknown ಹೇಳಿದರು...

2009 batch Kannada lesson nalli ondhu Padhyavitthu Harshichandra kavyam du adhannu upload maadi pls

Unknown ಹೇಳಿದರು...

Written by-Siddanna Masalli