ಶುಕ್ರವಾರ, ಸೆಪ್ಟೆಂಬರ್ 6, 2013

ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ

ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
ಸಂಯಮ ಶೀಲ ಸಡಲಿಪ ಜಾಲ
ಹೂಡಲು ಏಕೀ ಛಲ....ಆ......ಆ.....

ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗು ಎಲ್ಲೆ ಇರುವುದೆ ನಲ್ಲೆ
ಸಲ್ಲದು ಈ ಕಾತರ....ಆ......ಆ.....

ಹರೆಯದ ಬಾಲೆ..., ಅರಳಿದ ಮೊಲ್ಲೆ
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
ಯಾವುದೇನೆ ಆಗಿರಲಿ, ಕುಲದ ಹೆಸರು ಮಾಸದಿರಲಿ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ

ಹೆಣ್ಣಿನ ಬಾಳು........., ಹಣ್ಣಿನ ಹೋಳು
ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ದೂರದ ಈ ಬಗೆ ವಿರಹದ ಬೇಗೆ
ಬಾ ಬಳಿ ನನ್ನ ನವರಸ ಗಂಗೆ
ಕೊರಳ ತಾಳಿ ಪಡೆದ ಘಳಿಗೆ
ಎಲ್ಲ ಮುಡಿಪು ನನ್ನ ದೊರೆಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ

ಚಿತ್ರ: ಪ್ರೊಫೆಸರ್ ಹುಚ್ಚೂರಾಯ
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಸಂಗೀತ : ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ


Tag: Doora Doora alle nilli nanna devare

ಕಾಮೆಂಟ್‌ಗಳಿಲ್ಲ: