ಮಂಗಳವಾರ, ಸೆಪ್ಟೆಂಬರ್ 3, 2013

ತೂಗು ಮಂಚದಲ್ಲಿ


ತೂಗು ಮಂಚದಲ್ಲಿ ಕೂತು
ಮೇಘಶಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತಿದ್ದಳು

ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ
ಕಣ್ಣ ಮುಚ್ಚುತ್ತಿದ್ದಳು

ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ
ಕಮ್ಮನುಸಿರ ಬಿಟ್ಟಳು

ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ
ಬೆಳ್ಳಿ ಹಾಲ ಬಟ್ಟಲು

ಚಾಚುತಿರಲು ಅರಳಿದರಳು
ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು
ಹಾಯಿ ದೋಣಿ ತೇಲಿತು

ತನಗೆ ತಾನೇ ತೂಗುಮಂಚ
ತಾಗುತ್ತಿತ್ತು ದೂರದಂಚ
ತೆಗೆಯೊ ಗರುಡ ನಿನ್ನ ಚೊಂಚ
ಹಾಲು ಗಡಿಗೆ ಹೇಳಿತು

ಸಾಹಿತ್ಯ: ಎಚ್. ಎಸ್. ವೆಂಕಟೇಶಮೂರ್ತಿ
ಸಂಗೀತ: ಸಿ. ಅಶ್ವಥ್
ಗಾಯನ: ರತ್ನಮಾಲಾ ಪ್ರಕಾಶ್

ಚಿತ್ರಕೃಪೆ: http://www.martforart.com

Tag: Toogu manchadalli kootu, Thoogu manchadalli khootu


4 ಕಾಮೆಂಟ್‌ಗಳು:

Suma ಹೇಳಿದರು...

Thanks for this lyrics :) one of the best romantic track..

Vinod Kumar Bangalore ಹೇಳಿದರು...

ಧನ್ಯವಾದಗಳು ಹಂಚಿಕೊಂಡದ್ದಕ್ಕಾಗಿ

Badarinath Palavalli ಹೇಳಿದರು...

ಮುಂದೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ಈ ಗೀತೆಯನ್ನು ಮನೋಜ್ಞವಾಗಿ ಬಳಸಿಕೊಳ್ಳಲಾಗಿದೆ.

Unknown ಹೇಳಿದರು...

Thanks for the beautiful lyrics...