ಶನಿವಾರ, ಸೆಪ್ಟೆಂಬರ್ 7, 2013

ಕಣ್ಣು ರೆಪ್ಪೆ ಒಂದನೊಂದು ಮರೆವುದೆ


ಕಣ್ಣು ರೆಪ್ಪೆ ಒಂದನೊಂದು ಮರೆವುದೆ
ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೂವು ಗಂಧ ಬೇರೆ ಬೇರೆ ಇರುವುದೆ
ಅವು ಎಂದಾದರೂ ಒಂದನೊಂದು ಮರೆವುದೇ

ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಹೇಗೋ ಏನೋ ಒಲವು ಮೂಡಿ ಬೆಳೆಯಿತು
ತನುಮನಗಳು ಎಲ್ಲಾ ನಿನ್ನ ವಶವಾಯಿತು
ತನುಮನಗಳು ಎಲ್ಲಾ ನಿನ್ನ ವಶವಾಯಿತು
ನನ್ನಾ ನಿನ್ನ
ನನ್ನಾ ನಿನ್ನ ಪ್ರೇಮ ಬೆಸುಗೆ ಬಿಡುವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ

ಊರು ಕೇರಿ ಒಂದೂ ಪ್ರೇಮ ಕೇಳದು
ಜಾತಿ ಗೀತಿ ಹೆಸರು ಕೂಡ ತಿಳಿಯದು
ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಮನ ಮನ
ಮನ ಮನ ಮಾತನೊಂದೆ ಅರಿವುದು
ಕಣ್ಣು ರೆಪ್ಪೆ ಒಂದನೊಂದು ಮರೆವುದೆ
ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೂವು ಗಂಧ ಬೇರೆ ಬೇರೆ ಇರುವುದೆ
ಅವು ಎಂದಾದರೂ ಒಂದನೊಂದು ಮರೆವುದೇ

ಚಿತ್ರ: ಪರೋಪಕಾರಿ
ರಚನೆ: ಆರ್ ಎನ್ ಜಯಗೋಪಾಲ್
ಸಂಗೀತ: ಉಪೇಂದ್ರ ಕುಮಾರ್
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ


Tag: Kannu reppe ondanondu marevude

ಕಾಮೆಂಟ್‌ಗಳಿಲ್ಲ: