ಶನಿವಾರ, ಸೆಪ್ಟೆಂಬರ್ 7, 2013

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು, ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ,  ರಾಘವೇಂದ್ರ

ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು, ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ, ರಾಘವೇಂದ್ರ
ಬಿಸಿಲಲ್ಲೆ ಒಣಗಿಸು ನೆರಳಲ್ಲೆ ಮಲಗಿಸು, ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತ ಇರುವೆ, ರಾಘವೇಂದ್ರ

ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ, ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು, ರಾಘವೇಂದ್ರ

 ಚಿತ್ರ: ದೇವತಾ ಮನುಷ್ಯ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ:  ಉಪೇಂದ್ರ ಕುಮಾರ್
ಗಾಯನ:  ರಾಜ್ ಕುಮಾರ್ ಮತ್ತು ಬಿ. ಆರ್ ಛಾಯಾ

Tag: haalalladaru haaku neeralladaru haaku, halalladaru haku niralladaru haku

ಕಾಮೆಂಟ್‌ಗಳಿಲ್ಲ: