ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಗಿಸಲು ನೀನು ನಗುವೆನು ನಾನು


ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನಾ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ

ವೀಣೆಯು ನಾನು ವೈಣಿಕ ನೀನು
ತಂತಿಯು ಮೀಟದೆ ನುಡಿಯುವುದೇನು
ಬಯಸಿದ ರಾಗ ನುಡಿಸಿ ನೀ ನಲಿದಾಗ
ನನಗೂ ಆನಂದ ನಿನ್ನಿಂದ

ನುಡಿಸಲು ನೀನು ನುಡಿಯುವೆ ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ

ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನ ತಾಳಕೆ ನನ್ನ
ಕೈಹಿಡಿದೆನ್ನ ನಡೆಸು ಕರುಣಿಸು ಹರಸು
ನನ್ನಾ ಸೇವೆ ಸ್ವೀಕರಿಸು
ನಡೆಸಲು ನೀನು ನಡೆಯುವೆ ನಾನು
ನಾನೊಂದು ಬೊಂಬೆಯು ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ

ಚಿತ್ರ: ಗಾಳಿಮಾತು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಜಾನಕಿ


Tag: Nagisalu neenu naguvenu naanu, nagisalu ninu naguvenu nanu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ