ಶುಕ್ರವಾರ, ಸೆಪ್ಟೆಂಬರ್ 6, 2013

ನಲಿವ ಗುಲಾಬಿ ಹೂವೆ

ನಲಿವ ಗುಲಾಬಿ ಹೂವೆ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ, ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ, ಒಲವೋ ಛಲವೋ

ಸುಳಿದೇ ತಂಗಾಳಿಯಂತೆ ನುಡಿದೇ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ

ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು ಎಂದೆಂದು
ಇರು ನೀ ಹಾಯಾಗಿ ಹೀಗೆ, ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ, ನಿನಗಾಗಿ, ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ, ನಿನಗಾಗಿ, ನನಗಾಗಿ
ನಿನಗಾಗಿ ನನಗಾಗಿ

ಚಿತ್ರ: ಆಟೋ ರಾಜ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್.


Tag: Naliva gulabi hoove

ಕಾಮೆಂಟ್‌ಗಳಿಲ್ಲ: