ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆ ಕರ್ಣನಂತೆ ನೀ ದಾನಿಯಾದೆ

ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,

ಕಸದಂತೆ ಕಂಡರು, ಮನೆಯಲ್ಲಿ ಎಲ್ಲರೂ,
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
ನಿನ್ನಂತರಂಗವ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,

ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ,
ತನ್ನಾಸೆಯಂತೆಯೇ ಆಡೋದು ದೇವರು.
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗಾ  ನಿನ್ನನ್ನು ಮರೆಯರು.

ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯಕರು: ಕೆ.ಜೆ. ಏಸುದಾಸ್

Tag: Aa karnanante nee daaniyaade

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ