ಬುಧವಾರ, ಸೆಪ್ಟೆಂಬರ್ 4, 2013

ಕರಮುಗಿವೆ ಗುರುರಾಯ


ಕರಮುಗಿವೆ ಗುರುರಾಯ ನೀ
ಹರಸಬೇಕು ವರವೊಂದ ಬೇಡುವೆನು ನಿಡಲೇಬೇಕು

ನಿನ್ನ ಪಾವನ ನಾಮ ಉಸಿರಾಗಬೇಕು
ನಿನ್ನ ಸೇವೆಗೆ ಬಾಳು ಮುಡಿಪಾಗಬೇಕು
ನೀ ನಡೆವ ಹಾದಿಯಲಿ ಮಣ್ಣಾಗಬೇಕು
ನಿನ್ನ ನೆನಪಲೆ ಮನವು ಹಣ್ಣಾಗಬೇಕು

ತುಂಗೆಯ ನೀರಾಗಿ ನಾ ಹರಿಯಬೇಕು
ಪಾದದ ಧೂಳಾಗಿ ನಾ ನಲಿಯಬೇಕು
ಹೇಗಾದರೂ ನಿನ್ನ ನಾ ಸೇರಬೇಕು
ನಿನ್ನಲ್ಲಿ ನನ್ನನು ನಾ ಕಾಣಬೇಕು

ಸಾಹಿತ್ಯ: ಚಿ. ಉದಯಶಂಕರ್


Tag: Karamugive gururaya

ಕಾಮೆಂಟ್‌ಗಳಿಲ್ಲ: