ಭಾನುವಾರ, ಸೆಪ್ಟೆಂಬರ್ 8, 2013

ಏಕಾಂತವಾಗಿ ಮಾತಾಡೆ ಬಂದೆ ನಾನು

ಏಕಾಂತವಾಗಿ ಮಾತಾಡೆ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೆನು....

ಏಕಾಂತವಾಗಿ ಮಾತಾಡೆ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೆನು
ಏಕಾಂತವಾಗಿ....

ನಿನಗಾಗಿ ಮುಡಿಪಾದ ಬಿಡಿ ಹೂವನು
ಬೇರೊಬ್ಬ ಬೇಕೆಂದು ಕೇಳಿ ಬಂದನು
ಓಡೋಡಿ ಅದಕಾಗೆ ನಾ ಬಂದೆನು
ಇನ್ನೇನು ಭಯವಿಲ್ಲ ನಿನ್ನೇ ಕಂಡೆನು

ಕೈಗೊಂಬೆ ಹೆಣ್ಣೆಂದು ಈ ಆಟವೇ
ಈ ಗಂಡೆಂತ ಬೆಲೆಯೆಂದು ಗೊತ್ತಾಯಿತೇ
ಸೋತೀಗ ನಾನಿನ್ನ ಮನ ಗೆಲ್ಲುವೇ
ಗೆದ್ದಾಗ ಸೋತಾಗ ನಾವೊಂದಲ್ಲವೇ
ಏಕಾಂತವಾಗಿ ಮಾತಾಡೆ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೆನು
ಏಕಾಂತವಾಗಿ....

ಚಿತ್ರ: ಬೀದಿ ಬಸವಣ್ಣ
ಸಾಹಿತ್ಯ: ಜಿ. ವಿ. ಅಯ್ಯರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ


Tag: Ekaantavaagi maataade bande naanu, Ekantavagi matade bande nanu

ಕಾಮೆಂಟ್‌ಗಳಿಲ್ಲ: