ಈ ದೇಶ ಚೆನ್ನ ಈ ಮಣ್ಣು ಚಿನ್ನ
ಈ ದೇಶ ಚೆನ್ನ ಈ
ಮಣ್ಣು ಚಿನ್ನ
ಎಲ್ಲೂ ನಾ
ಕಾಣೆನಲ್ಲ
ಇಂಥ ಅಂದ ಇಂಥ ಚಂದ
ನಮ್ಮ ನಾಡಿಗೆ
ಸಾಟಿ ಇಲ್ಲ.
ಕರ್ನಾಟ ಕಾವೇರಿ
ತಾಯಾಗಿ ಬಂದು
ನಮ್ಮಾಸೆ ಕೈಗೂಡೆ
ವರದಾನ ತಂದು
ಹಸಿ ಹಸಿರಲ್ಲಿ
ಹನಿ ಹನಿಯಲ್ಲಿ
ಆನಂದ ಕಂಡೇನು
ಎಂದೂ ಎಂದೂ
ಇಲ್ಲಿ ನಾನೇ ಧನ್ಯ
ಈ ಜನ್ಮ ನೂರಾರು
ತಾಳಿ ಬರುವೆ
ಈ ತಾಯಿ
ಮಡಿಲಲ್ಲೆ ಮಗುವಾಗಿ ಇರುವೆ
ಕಣ ಕಣದಲ್ಲಿ ಪರಿ
ಪರಿಯಲ್ಲಿ
ಸಂತೋಷ ಕಂಡೇನು
ಎಂದೂ ಎಂದೂ
ಅದೇ ನನ್ನ ಪುಣ್ಯ.
ಚಿತ್ರ:
ಕಾವೇರಿ
ಸಾಹಿತ್ಯ:
ವಿಜಯನಾರಸಿಂಹ
ಸಂಗೀತ: ಎಂ.
ರಂಗರಾವ್
ಗಾಯನ: ಎಸ್. ಪಿ.
ಬಾಲಸುಬ್ರಮಣ್ಯಂ
Tag: Ee desha chenna ee mannu chinna
ಕಾಮೆಂಟ್‌ಗಳು