ಶನಿವಾರ, ಸೆಪ್ಟೆಂಬರ್ 7, 2013

ನೋಟದಾಗೆ ನಗೆಯ ಮೀಟಿ

ನೋಟದಾಗೆ ನಗೆಯ ಮೀಟಿ
ಮೋಜಿನಾಗೆ ಎಲ್ಲೆಯ ದಾಟಿ
ಮೋಡೀಯ ಮಾಡಿದೋಳ
ಪರಸಂಗ ಐತೆ, ಪರಸಂಗ ಐತೆ
ಆಹಾ,
ಮೋಹಾವ ತೋರಿದೋಳ
ಪರಸಂಗ ಐತೆ, ಪರಸಂಗ ಐತೆ

ಬರಡಾದ ಬದುಕೀಗೆ ಹೊಸಾನೇಸ್ರು ಅರಳೈತೆ
ಮನಸ್ನಾಗೆ ಒಸ ಆಸೆ ಒಸ ಬಾಸೆ ಬೆಳೆದೈತೆ
ಕುಂತ್ರೂ ನಿಂತ್ರೂ ನನ್ನ ಚೆಲುವಿ ಚೆಲುವೇ ಕಾಡೈತೆ
ಮೈಯಾಗೆ ಸಂತೋಸದ ಮಲ್ಲೀಗೆ ಬಿರಿದೈತೆ
ಮೈಯಾಗೆ ಸಂತೋಸದ ಮಲ್ಲೀಗೇ ಬಿರಿದೈತೆ

ಕಡುಬಾಳಾ ಹಾದ್ಯಾಗೆ ನನ್ನಪರಂಜಿ ಹೊಳೆದೈತೆ
ಹಗಲಾಗೆ ಇರುಳಾಗೆ ಆ ನಿಲುವೆ ಸೆಳೆದೈತೆ
ಬಲವಾದ ಹಂಬಲಕೆ ನಗೆಬಿಲ್ಲೆ ಮಿನುಗೈತೆ
ನನ್ನ ಹುಡುಗಿ ತನಿಬೆಡಗು ಮಿಂಚೂತ ಮೆರೆದೈತೆ
ನನ್ನಾ ಹುಡುಗಿ ತನಿಬೆಡಗು ಮಿಂಚೂತಾ ಮೆರೆದೈತೆ

ಕೊರಳಾಗೆ ಇನಿದನಿ ಕೋಗಿಲೆ ಸರವೈತೆ
ಹ್ಞಾ,
ನಡೆಯಾಗೆ ತುಳುಕುವಾ ಹಂಸದಾ ಬಳುಕೈತೆ
ಮುಖದಾಗೆ ತಾವರೆಯ ಒಳಪೇ ಚೆಲ್ಲೈತೆ
ನನ್ರಾಣಿ ನಿಜರೂಪು ರಂಗನ್ನೇ ಹರಿಸೈತೆ
ನನ್ರಾಣಿ ನಿಜರೂಪು ರಂಗನ್ನೇ ಹರಿಸೈತೆ

ಚಿತ್ರ: ಪರಸಂಗದ ಗೆಂಡೆತಿಮ್ಮ
ಸಾಹಿತ್ಯ: ದೊಡ್ಡರಂಗೇಗೌಡ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್
ಸಂಗೀತ: ರಾಜನ್ ಮತ್ತು ನಾಗೇಂದ್ರ


Tag: Notadage nagye meeti, parasangada gendetimma


ಕಾಮೆಂಟ್‌ಗಳಿಲ್ಲ: