ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲಗೋಪಾಲನಾ

ಬಾಲಗೋಪಾಲನಾ,
ಬಾಲ ಗೋಪಾಲನಾ

ಮುಂಜಾನೆ ಎದ್ದು ಮುದ್ದಿಸಿ
ಪನ್ನೀರ ಸ್ನಾನ ಮಾಡಿಸಿ
ಶ್ರೀಗಂಧವನ್ನು ಲೇಪಿಸಿ
ಉಯ್ಯಾಲೆ ಮೇಲೆ ಕೂರಿಸಿ
ಮಮತೆಯಿಂದ ತೂಗಿ ತೂಗಿ
ನಕ್ಕಾಡಿ ಹಾಡುತಿರುವೆ
ವಾತ್ಸಲ್ಯ ತುಂಬುತಿರುವೆ
ಎಲ್ಲ ಪ್ರೀತಿ ಹಂಚುವೆ
ಬಾಲಗೋಪಾಲನಾ,
ಬಾಲ ಗೋಪಾಲನಾ

ಮೂರು ಲೋಕನಾಚೋ ಹಾಗೆ
ನೂರು ನೂರು ಕನಸು ಹಂಚುವೆ
ನನ್ನ ಎಲ್ಲ ಆಸೆ ಎಲ್ಲ
ನಿನ್ನ ಕಣ್ಣ ತುಂಬ ತುಂಬುವೆ
ಆನಂದದಾಯಿ ನಂದಗೋಕುಲ
 ನಕ್ಕರೆ ಆನಂದ ಪ್ರೇಮದೇಗುಲ
ದೇವಕಿಯ ಈ  ಒಂದು ಬದುಕಿಗೆ
 ನೀನಿರಲು ಇಲ್ಲ ಯಾವ ತಳಮಳ
ಮರಳಿ ಮರಳಿ ಮುರಳಿ ಲೋಲ
ನುಡಿಸುವಂತ ನಾದವ
ಕಂಡ ಒಡನೆ ಹೇಳೋ ಮಗನು
ಅವನೆ ತಾನೆ ಮಾಧವ
ಇಂಥ ಕಂದನ ಮುನ್ನನ
ಜೋ ಜೋ
ಬಾಲಗೋಪಾಲನಾ,
ಬಾಲ ಗೋಪಾಲನಾ

ಗಾಯನ: ಕವಿತಾ ಕೃಷ್ಣಮೂರ್ತಿ
ಸಾಹಿತ್ಯ: ಕೆ ಕಲ್ಯಾಣ್
ಸಂಗೀತ: ದೇವಾ


Tag: Bala Gopalana, Baala Gopalanaa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ